ರಶ್ಮಿಕಾ ಜತೆ ನಿಶ್ಚಿತಾರ್ಥ? ಹಾಗೇನು ಇಲ್ಲ ಎಂದ ರಕ್ಷಿತ್ ಶೆಟ್ಟಿ!
ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು...

Published On :
ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರು ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ, ನಿಜ ಜೀವನದಲ್ಲಿ ಜೋಡಿಯಾಗುತ್ತಿದ್ದಾರಂತೆ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ಹಬ್ಬಿದ ಸುದ್ದಿ ಅವರ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟುಮಾಡಿತ್ತು. ವರದಿಯೊಂದರ ಪ್ರಕಾರ ಅವರು ಇದೇ ತಿಂಗಳ 30ರಂದು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು ಜೂನ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು.
ಈ ಬಗ್ಗೆ ಅವರನ್ನೇ ಕೇಳಿ ಖಚಿತಪಡಿಸಿಕೊಳ್ಳೋಣವೆಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಕರೆ ಮಾಡಲು ಪ್ರಯತ್ನಿಸಿದರೆ ಮೇ 4ರಂದು ತೆಲುಗು ಚಿತ್ರವೊಂದರ ಶೂಟಿಂಗ್ ಮುಗಿಸಿರುವ ರಶ್ಮಿಕಾ ತಮ್ಮ ಅಂತಿಮ ವರ್ಷದ ಪರೀಕ್ಷೆ ಸಿದ್ಧತೆಯಲ್ಲಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ಪ್ರತಿಕ್ರಿಯೆಗೆ ಸಿಕ್ಕರು. ಮುಸಿ ನಗುವಿನೊಂದಿಗೆ ರಶ್ಮಿಕಾ ಜೊತೆಗಿನ ಮದುವೆಯ ಬಗ್ಗೆ ಹರಿದಾಡುತ್ತಿರುವ ಗಾಳಿಸುದ್ದಿಯನ್ನು ನಿರಾಕರಿಸಿದರು. ಆದರೆ ನಟಿಯನ್ನು ಪ್ರೀತಿಸುತ್ತಿದ್ದಾರ ಎಂಬ ಬಗ್ಗೆ ಉತ್ತರಿಸಲೂ ಇಲ್ಲ, ನಿರಾಕರಿಸಲೂ ಇಲ್ಲ.
ರಕ್ಷಿತ್ ಹೇಳಿದ್ದಿಷ್ಟು: ಸದ್ಯಕ್ಕೆ ನಾವಿಬ್ಬರೂ ನಮ್ಮ ನಮ್ಮ ವೃತ್ತಿಯ ಬಗ್ಗೆ ಗಮನ ಹರಿಸುತ್ತಿದ್ದೇವೆ. ಇನ್ನು 2 ವರ್ಷದವರೆಗೆ ಮದುವೆ ಬಗ್ಗೆ ಯೋಚಿಸುವುದಿಲ್ಲ. ಮದುವೆ ಎಂಬುದು ಕೇವಲ ಎರಡು ವ್ಯಕ್ತಿಗಳ ಅಭಿಪ್ರಾಯವಲ್ಲ. ಇದರಲ್ಲಿ ಎರಡು ಕುಟುಂಬಗಳು ಕೂಡ ಭಾಗಿಯಾಗುತ್ತದೆ. ಹಾಗಾಗಿ ನನ್ನದೇ ಆದ ಸಮಯ ತೆಗೆದುಕೊಳ್ಳುತ್ತೇನೆ ಎಂದರು.
ಇನ್ನು ರಶ್ಮಿಕಾ ಅವರ ತಾಯಿ ಪ್ರತಿಕ್ರಿಯೆಗೆ ಸಿಕ್ಕರು.''ರಶ್ಮಿಕಾರಂತಹ ಹುಡುಗಿ ಸೊಸೆಯಾಗಿ ಸಿಗಬೇಕು ಎಂದು ರಕ್ಷಿತ್ ತಾಯಿ ನಾನು ಭೇಟಿಯಾದಾಗ ಒಮ್ಮೆ ಹೇಳಿದ್ದರು. ರಕ್ಷಿತ್ ಕೂಡ ಬುದ್ಧಿವಂತ ಹಾಗೂ ಸಂಭಾವಿತ ವ್ಯಕ್ತಿಯಂತೆ ಕಾಣುತ್ತಾನೆ. ನಾನು ರಶ್ಮಿಕಾಳ ಆಯ್ಕೆಯನ್ನು ಗೌರವಿಸುತ್ತೇನಾದರೂ ಪ್ರಸ್ತುತ ಆಕೆಯ ಮದುವೆ ಸದ್ಯಕ್ಕಿಲ್ಲ ಎಂದು ವದಂತಿಗಳಿಗೆಲ್ಲಾ ತೆರೆ ಎಳೆದರು.
ಮುಂದೂಡಲ್ಪಟ್ಟ ರಕ್ಷಿತ್ ನಿರ್ದೇಶನದ ಚಿತ್ರ: ರಕ್ಷಿತ್ ನಿರ್ದೇಶನದ ಸುದೀಪ್ ನಟನೆಯ ಥಗ್ಸ್ ಆಫ್ ಮಾಲ್ಗುಡಿ ಚಿತ್ರ ಮುಂದೂಡಲ್ಪಟ್ಟಿದೆ. ಥಗ್ಸ್ ಚಿತ್ರದ ಶೂಟಿಂಗ್ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಚಿತ್ರದ ಸ್ಕ್ರಿಪ್ಟ್ ತಯಾರಿಗೆ ರಕ್ಷಿತ್ ಗೆ ಇನ್ನೂ ಸಮಯ ಬೇಕಾಗಿದೆ. ಅವರ ಮುಂದಿನ ಪ್ರಾಜೆಕ್ಟ್ ಅವನೇ ಶ್ರೀಮಾನ್ ನಾರಾಯಣ ಕೆಲಸ ನಡೆಯುತ್ತಿದೆ. ನನ್ನ ಶುಭ ಹಾರೈಕೆ ಅವರಿಗೆ ಯಾವತ್ತೂ ಇದೆ ಎಂದು ಸ್ವತಃ ಸುದೀಪ್ ಟ್ವೀಟ್ ಮಾಡಿದ್ದರು.
ಶ್ರೀಮಾನ್ ನಾರಾಯಣ ಚಿತ್ರದ ಸ್ಕ್ರಿಪ್ಟ್ ಬರಹಗಾರ ಮತ್ತು ನಟ ನಾನು. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಒಟ್ಟಿಗೇ ಎರಡು ಚಿತ್ರಗಳಿಗೆ ಗಮನ ನೀಡಲು ಸಾಧ್ಯವಿಲ್ಲ. ಹೀಗಾಗಿ ಸುದೀಪ್ ಅವರ ಚಿತ್ರಕ್ಕೆ ಉತ್ತಮ ಕೆಲಸ ಮಾಡಲು ಅದನ್ನು ಮುಂದೂಡಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು.
ಸುದೀಪ್ ಪ್ರಸ್ತುತ ಪ್ರೇಮ್ ನಿರ್ದೇಶನದ ದ ವಿಲನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


