'ತಾರಕ್'ಗೆ ಮತ್ತೊಬ್ಬ ನಾಯಕಿ ಶಾನ್ವಿ ಶ್ರೀವಾಸ್ತವ?
ಪ್ರಕಾಶ್ ಜಯರಾಮ್ ನಿರ್ದೇಶನದ 'ತಾರಕ್' ಸಿನೆಮಾದ ಚಿತ್ರೀಕರಣ ಸದ್ಯಕ್ಕೆ ಭರದಿಂದ ಸಾಗುತ್ತಿದೆ. ದರ್ಶನ್ ಅಭಿನಯದ ಈ ಸಿನೆಮಾದಲ್ಲಿ ಈಗಾಗಲೇ ನಟಿ ಶ್ರುತಿ ಹರಿಹರನ್ ಕೂಡ ಸೆಟ್ ನಲ್ಲಿ...

Published On :
ಬೆಂಗಳೂರು: ಪ್ರಕಾಶ್ ಜಯರಾಮ್ ನಿರ್ದೇಶನದ 'ತಾರಕ್' ಸಿನೆಮಾದ ಚಿತ್ರೀಕರಣ ಸದ್ಯಕ್ಕೆ ಭರದಿಂದ ಸಾಗುತ್ತಿದೆ. ದರ್ಶನ್ ಅಭಿನಯದ ಈ ಸಿನೆಮಾದಲ್ಲಿ ಈಗಾಗಲೇ ನಟಿ ಶ್ರುತಿ ಹರಿಹರನ್ ಕೂಡ ಸೆಟ್ ನಲ್ಲಿ ಭಾಗಿಯಾಗಿದ್ದಾರೆ.
ಮತ್ತೊಬ್ಬ ನಾಯಕನಟಿಯ ಶೋಧನೆಯಲ್ಲಿದ್ದ ನಿರ್ದೇಶಕ, ಈಗ ಶಾನ್ವಿ ಶ್ರೀವಾಸ್ತವ ಅವರನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಈ ಮೊದಲಿಗೆ ರಶ್ಮಿಕಾ ಮಂದಣ್ಣ ಅವರನ್ನು ಪರಿಗಣಿಸಲಾಗಿತ್ತು, ಆದರೆ ನಟಿಯ ಮತ್ತೊಂದು ಸಿನೆಮಾದ ಚಿತ್ರೀಕರಣದ ಜೊತೆಗೆ ದಿನಾಂಕಗಳು ಕಲಹಗೊಂಡಿರುವುದರಿಂದ ಈ ಆಯ್ಕೆ ಮಾಡಲಾಗಿದೆ.
ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿಲ್ಲ. ಪಾತ್ರಕ್ಕೆ ನಟಿ ಸೂಕ್ತ ಎಂದಷ್ಟೇ ಹೇಳಲಾಗಿದ್ದು, ಶಾನ್ವಿ ಅಧಿಕೃತವಾಗಿ ಸಿನೆಮಾಗೆ ಸಹಿ ಹಾಕಲು ಕಾಯಲಾಗುತ್ತಿದೆ.
ಈ ವಾರದಲ್ಲಿ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ. ಈಗ ಎಲ್ಲವು ನಿಶ್ಚಯಿಸಿದಂತೆ ನಡೆದರೆ ಮೇನ ಮೊದಲ ವಾರದಲ್ಲಿ ತಂಡ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲಿದೆ. ದುಷ್ಯಂತ್ ನಿರ್ಮಾಣದ ಈ ಸಿನೆಮಾದಲ್ಲಿ ಶೀರ್ಷಿಕೆ ಪಾತ್ರ 'ತಾರಕ್' ನನ್ನ ದರ್ಶನ್ ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಎ ವಿ ಕೃಷ್ಣಕುಮಾರ್ ಅವರ ಛಾಯಾಗ್ರಹಣ ಸಿನೆಮಾಗಿದೆ.
'ಚಂದ್ರಲೇಖಾ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಾನ್ವಿ ಯಶ್ ಎದುರು 'ಮಾಸ್ಟರ್ ಪೀಸ್' ಸಿನೆಮಾದಲ್ಲಿ ನಟಿಸಿದ ನಂತರ ಹೆಚ್ಚು ಜನಪ್ರಿಯರಾಗಿದ್ದರು. ನಂತರ ಶ್ರೀಮುರಳಿ ಮುಖ್ಯಭೂಮಿಕೆಯಲ್ಲಿದ್ದ 'ಮುಫ್ತಿ' ಸಿನೆಮಾದ ಭಾಗವಾಗಿದ್ದಲ್ಲದೆ, ಈಗ ಮನೋರಂಜನ್ ಜೊತೆಗೆ ನಟಿಸಿರುವ 'ಸಾಹೇಬ' ಬಿಡುಗಡೆಗೆ ಕಾಯುತ್ತಿದ್ದಾರೆ.
ಹಾಗೆಯೇ ಸಚಿನ್ ನಿರ್ದೇಶನದ 'ಅವನೇ ಶ್ರೀಮಾನ್ ನಾರಾಯಣ' ಸಿನೆಮಾದಲ್ಲಿ ರಕ್ಷಿತ್ ಜೊತೆಗೆ ನಟಿಸಲು ಉತ್ಸಾಹದಿಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


