ಸಿನಿಮಾ ಸುದ್ದಿ

ದರ್ಶನ್-ಸುದೀಪ್ ಜಗಳ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರ ಏನು?

ನಟ ದರ್ಶನ್ ಹಾಗೂ ನಟ ಸುದೀಪ್ ಅವರ ನಡುವಿನ ಸಂಘರ್ಷವನ್ನು ಬಗೆಹರಿಸುವಂತೆ ಅಂಬರೀಷ್ ಅವರಿಗೆ ಹೇಳಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್ ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಅದೇ ಧಾಟಿಯಲ್ಲೇ ಉತ್ತರಿಸಿದ್ದಾರೆ.

ದರ್ಶನ್-ಸುದೀಪ್ ಜಗಳ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರ ಏನು?
ಸಂಗ್ರಹ ಚಿತ್ರ
Published On :

ಬೆಂಗಳೂರು: ನಟ ದರ್ಶನ್ ಹಾಗೂ ನಟ ಸುದೀಪ್ ಅವರ ನಡುವಿನ ಸಂಘರ್ಷವನ್ನು ಬಗೆಹರಿಸುವಂತೆ ಅಂಬರೀಷ್ ಅವರಿಗೆ ಹೇಳಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್ ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಅದೇ ಧಾಟಿಯಲ್ಲೇ ಉತ್ತರಿಸಿದ್ದಾರೆ.

ದರ್ಶನ್ ಮತ್ತು ಸುದೀಪ್ ಅವರ ಜಗಳದಲ್ಲಿ ತಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿರುವ ಅವರು, ಅವರಿಬ್ಬರೂ ತಮ್ಮ ತಮ್ಮ ನಿರ್ಧಾರಗಳನ್ನು ಸ್ವಂತವಾಗಿಯೇ ತೆಗೆದುಕೊಳ್ಳುವಷ್ಟು ಪ್ರಬುದ್ಧರು. ಹೀಗಾಗಿ ಅವರ ನಿರ್ಧಾರಗಳನ್ನು ನಾವು ಗೌರವಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಮೆಜೆಸ್ಟಿಕ್ ಚಿತ್ರದಲ್ಲಿನ ದರ್ಶನ್ ಅವರ ಆಯ್ಕೆಗೆ ತಾವೇ ಕಾರಣ ಎಂಬ ಸುದೀಪ್ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ದರ್ಶನ್, ತಾವು ಮತ್ತು ಸುದೀಪ್ ಚಿತ್ರರಂಗದ ನಟರಷ್ಟೇ. ತಾವು ಸ್ನೇಹಿತರಲ್ಲ ಎಂದು ಹೇಳಿದ್ದರು. ಅಲ್ಲದೆ ಸುದೀಪ್ ಅವರು ತಮ್ಮ ಹೇಳಿಕೆಗೆ ಸಾಕ್ಷ್ಯ ನೀಡಲೀ ಎಂದೂ ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.