ಸಿನಿಮಾ ಸುದ್ದಿ

ನಟಿ ಅಮೂಲ್ಯ ಅದ್ದೂರಿ ನಿಶ್ಚಿತಾರ್ಥ; ಮೇ ತಿಂಗಳಲ್ಲಿ ಮದುವೆ!

ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಸೋಮವಾರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.

ನಟಿ ಅಮೂಲ್ಯ ಅದ್ದೂರಿ ನಿಶ್ಚಿತಾರ್ಥ; ಮೇ ತಿಂಗಳಲ್ಲಿ ಮದುವೆ!
ನಟಿ ಅಮೂಲ್ಯ ಅದ್ದೂರಿ ನಿಶ್ಚಿತಾರ್ಥ
Published On :

ಬೆಂಗಳೂರು: ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಸೋಮವಾರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.

ನಗರದ ಶ್ರೀಸಾಯಿ ಪ್ಯಾಲೆಸ್ ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಸಂಜೆ ನೆರವೇರಿತು. ಅದ್ಧೂರಿಯಾಗಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಅಮೂಲ್ಯ ಮತ್ತು  ಜಗದೀಶ್ ಅವರ ಕುಟುಂಬಸ್ಥರು, ಸಂಬಂಧಿಗಳಲ್ಲದೇ ಚಿತ್ರರಂಗದ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಪ್ರಮುಖವಾಗಿ ಅಮೂಲ್ಯ ಮತ್ತು ಜಗದೀಶ್ ಅವರ ಕುಟುಂಬಕ್ಕೆ ಪರಿಚಿತರಾದ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪತ್ನಿ  ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಭಾವಿ ದಂಪತಿಗಳನ್ನು ಆಶೀರ್ವದಿಸಿದರು.

ಇನ್ನು ಕಾರ್ಯಕ್ರಮಕ್ಕೆ ಖ್ಯಾತ ಸ್ಯಾಕ್ಸೋಫೋನ್ ವಾದಕ ಹರಿಪ್ರಸಾದ್ ಅವರು ಸಂಗೀತ ನುಡಿಸಿದ್ದು, ಇಡೀ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು. ಅಂತೆಯೇ ವರ ಜಗದೀಶ್ ಅವರ ಅಣ್ಣ ಹಾಗೂ ಸಹೋದರಿ ತಂದಿದ್ದ ವಿಶಿಷ್ಟ ಕೇಕ್  ಕೂಡ ಎಲ್ಲರ ಕಣ್ಮನ ಸೆಳೆಯಿತು.

ಅಮೂಲ್ಯ ಹಾಗೂ ಜಗದೀಶ್ ಅವರು ಪರಸ್ಪರರ ಕೈಗೆ ವಜ್ರದ ಉಂಗುರಗಳನ್ನು ತೊಡಿಸಿದರು. ಕುಟುಂಬ ಮೂಲಗಳು ತಿಳಿಸಿರುವಂತೆ ಇದೇ ಮೇ ತಿಂಗಳ 10-11 ಅಥವಾ 20-21ರಂದು ವಿವಾಹ ಕಾರ್ಯಕ್ರಮ ನೆರವೇರುವ  ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅಮೂಲ್ಯ ಕೈ ಹಿಡಿಯಲಿರುವ ಜಗದೀಶ್ ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೆಟರ್ ಮಗನಾಗಿದ್ದು, ಲಂಡನ್‍'ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಕಳೆದ ತಿಂಗಳಿನಲ್ಲಷ್ಟೇ ನಟಿ  ಅಮೂಲ್ಯ ಮತ್ತು ಜಗದೀಶ್ ಅವರ ವಿವಾಹ ಸಂಬಂಧ ತಾಂಬೂಲ ಶಾಸ್ತ್ರ ನೆರೆವೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.