ಸಿನಿಮಾ ಸುದ್ದಿ

ಹಾಸ್ಯ ಚಿತ್ರವೊಂದಕ್ಕೆ ಒಂದಾಗಲಿದ್ದಾರೆ ಕೃಷ್ಣ ಮತ್ತು ಸುದೀಪ್

ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಹಾಸ್ಯ ಚಿತ್ರವೊಂದಕ್ಕೆ ಒಂದಾಗಲಿದ್ದಾರೆ ಕೃಷ್ಣ ಮತ್ತು ಸುದೀಪ್
ಸುದೀಪ್
Published On :
ಬೆಂಗಳೂರು: ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 
ನಿರ್ದೇಶಕ ಸದ್ಯಕ್ಕೆ ಕಥೆಗಾರರೊಂದಿಗೆ ಹೈದರಾಬಾದ್ ನಲ್ಲಿದ್ದು, ವಿವಿಧ ಕಥೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವಾರಾಂತ್ಯಕ್ಕೆ ನಗರಕ್ಕೆ ಹಿಂದಿರುಗಳಿರುವ ನಟ ನಂತರ ಬ್ಯಾಂಗ್ಕಾಕ್ ಗೆ ತೆರಳಿ ಅಲ್ಲಿ ನಟ ಸುದೀಪ್ ಅವರನ್ನು ಭೇಟಿ ಮಾಡಲಿದ್ದಾರೆ. ಸುದೀಪ್ ಸದ್ಯಕ್ಕೆ ಬ್ಯಾಂಗ್ಕಾಕ್ ನಲ್ಲಿ 'ದ ವಿಲನ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 
"ಬ್ಯಾಂಗ್ಕಾಕ್ ಗೆ ಪ್ರವಾಸ ನನಗೆ ಅವಶ್ಯಕ ಏಕೆಂದರೆ ಸುದೀಪ್ ಯಾವ ವಿಷಯದ ಸಿನೆಮಾ ಇಷ್ಟ ಪಡುತ್ತಾರೋ ಅದನ್ನು ಅಂತಿಮಗೊಳಿಸಬಹುದು. ನಂತರ ಚಿತ್ರಕಥೆ ಮುಂದುವರೆಸುವುದಕ್ಕೆ ನನಗೆ ಸಾಕಷ್ಟು ಸಮಯ ಸಿಗುತ್ತದೆ" ಎನ್ನುತ್ತಾರೆ ನಿರ್ದೇಶಕ. 
ಸುದೀಪ್ ಅವರಿಗೆ ಆಯ್ಕೆ ಮಾಡಿಕೊಳ್ಳಲು ಕೃಷ್ಣ ಅವರ ಬಳಿ ಹಲವು ಸ್ಕ್ರಿಪ್ಟ್ ಗಳು ಇವೆಯಂತೆ. "ಈ ಬಾರಿ ಮಾಮೂಲಿತನದಿಂದ ಹೊರಬಂದು ಇಲ್ಲಿಯವರೆಗೂ ನಾನು ಪ್ರಯತ್ನಿಸದ ಚಿತ್ರಕಥೆಯನ್ನು ಹೇಳಬೇಕೆಂದಿದ್ದೇನೆ" ಎನ್ನುವ ಕೃಷ್ಣ ಹಾಸ್ಯ ಮನರಂಜನಾ ಚಿತ್ರದ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸುತ್ತಾರೆ. 
ಕೃಷ್ಣ ನಿರ್ದೇಶನದ ಸುದೀಪ್ ಅಭಿನಯದ 'ಹೆಬ್ಬುಲಿ' ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಕಂಡು ಯಶಸ್ವಿ ಚಿತ್ರ ಎನಿಸಿಕೊಂಡಿತ್ತು. ಈಗ ಆ ಯಶಸ್ಸನ್ನು ಮರುಕಳಿಸಲು ನಿರ್ದೇಶಕ ಸಿದ್ಧರಾಗುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.