ಸಿನಿಮಾ ಸುದ್ದಿ

ಇಟಲಿ ಮತ್ತು ಸ್ವಿಟ್ಸರ್ಲ್ಯಾಂಡ್ ನಾದ್ಯಂತ 'ತಾರಕ್' ಹಾಡುಗಳಿಗೆ ಚಿತ್ರೀಕರಣ

ಮಲೇಷಿಯಾದಲ್ಲಿ ಸುದೀರ್ಘ ಹಂತದ ಚಿತ್ರೀಕರಣ ನಡೆಸಿ 'ತಾರಕ್' ಚಿತ್ರತಂಡ ಹಿಂದಿರುಗಿದ್ದು ಈಗ ಅದೇ ಉಸಿರಿನಲ್ಲಿ ಮುಂದಿನ ವಿದೇಶಿ ಚಿತ್ರೀಕರಣಕ್ಕೆ ಮುಂದಾಗಿದೆ. ನಟ ದರ್ಶನ್, ಶಾನ್ವಿ ಶ್ರೀವಾಸ್ತವ

ಇಟಲಿ ಮತ್ತು ಸ್ವಿಟ್ಸರ್ಲ್ಯಾಂಡ್ ನಾದ್ಯಂತ 'ತಾರಕ್' ಹಾಡುಗಳಿಗೆ ಚಿತ್ರೀಕರಣ
ಶಾನ್ವಿ ಶ್ರೀವಾಸ್ತವ-ದರ್ಶನ್-ಶ್ರುತಿ ಹರಿಹರನ್
Published On :
ಬೆಂಗಳೂರು: ಮಲೇಷಿಯಾದಲ್ಲಿ ಸುದೀರ್ಘ ಹಂತದ ಚಿತ್ರೀಕರಣ ನಡೆಸಿ 'ತಾರಕ್' ಚಿತ್ರತಂಡ ಹಿಂದಿರುಗಿದ್ದು ಈಗ ಅದೇ ಉಸಿರಿನಲ್ಲಿ ಮುಂದಿನ ವಿದೇಶಿ ಚಿತ್ರೀಕರಣಕ್ಕೆ ಮುಂದಾಗಿದೆ. ನಟ ದರ್ಶನ್, ಶಾನ್ವಿ ಶ್ರೀವಾಸ್ತವ ಮತ್ತು ನಿರ್ದೇಶಕ ಪ್ರಕಾಶ್ ಜಯರಾಮ್ ಸೇರಿದಂತೆ ೩೦ ಜನರ ಚಿತ್ರತಂಡ ಇಂದು ಇಟಲಿಗೆ ತೆರಳಲಿದ್ದು, ಮುಂದಿನ ೧೨ ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ. ಇನ್ನು ಕೆಲವು ದಿನಗಳಲ್ಲಿ ಶ್ರುತಿ ಹರಿಹರನ್ ಕೂಡ ಚಿತ್ರತಂಡ ಸೇರಲಿದ್ದಾರೆ. 
ಇಟಲಿ ಮತ್ತು ಸ್ವಿಟ್ಸರ್ಲ್ಯಾಂಡ್ ನ ಸುಮಾರು ಆರು ತಾಣಗಳಲ್ಲಿ ಎರಡು ಡ್ಯುಯೆಟ್ ಹಾಡುಗಳನ್ನು ಚಿತ್ರೀಕರಣ ನಡೆಸಲು ಪ್ರಕಾಶ್ ಯೋಜಿಸಿದ್ದಾರೆ. 
"ನಾವು ಈ ಹಾಡುಗಳ ಭಾಗಗಳನ್ನು ವಿವಿಧ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಆದುದರಿಂದ ಇಲ್ಲಿ ಸ್ವಲ್ಪ ಹೆಚ್ಚಿನ ಸಮಯವನ್ನೇ ಕಳೆಯುತ್ತಿದ್ದೇವೆ" ಎನ್ನುವ ನಿರ್ದೇಶಕ ಮಿಲನ್ ನಲ್ಲಿ ದರ್ಶನ್ ಅವರ ಪರಿಚಯಾತ್ಮಕ ಹಾಡನ್ನೂ ಚಿತ್ರೀಕರಿಸಲು ಮುಂದಾಗಿದ್ದಾರೆ. 
"ಇವೆಲ್ಲವೂ ಹೊರಾಂಗಣ ಚಿತ್ರೀಕರಣ" ಎಂದು ತಿಳಿಸುವ ಪ್ರಕಾಶ್ ಹಿಂದಿರುಗಿದ ಮೇಲೆ ಪ್ರಮುಖ ಭಾಗವನ್ನು ಬೆಂಗಳೂರಿನಲ್ಲಿಯೂ ಚಿತ್ರೀಕರಿಸಲಾಗುವುದು ಎಂದಿದ್ದಾರೆ. 
ಶೀರ್ಷೆಕ ಪಾತ್ರವನ್ನು ದರ್ಶನ್ ನಿರ್ವಹಿಸುತ್ತಿದ್ದು, ಸೆಪ್ಟೆಂಬರ್ ನಲ್ಲಿ ಸಿನೆಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ದುಷ್ಯಂತ್ ನಿರ್ಮಾಣದ ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎ ವಿ ಕೃಷ್ಣಕುಮಾರ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.