ಕೊಲೆ ಯತ್ನ ಪ್ರಕರಣ: 'ಸ್ಟೈಲ್ ರಾಜ' ಚಿತ್ರದ ನಿರ್ದೇಶಕ ಸೇರಿ ನಾಲ್ವರ ಬಂಧನ
ಕೊಲೆ ಯತ್ನ ಹಾಗೂ ಕೊಲೆ ಸಂಚು ರೂಪಿಸಿದ ಆರೋಪದ ಮೇಲೆ 'ಸ್ಟೈಲ್ ರಾಜ' ಚಿತ್ರದ ನಿರ್ದೇಶಕ ಹರೀಶ್ ಸೇರಿದಂತೆ...

Published On :
ಬೆಂಗಳೂರು: ಕೊಲೆ ಯತ್ನ ಹಾಗೂ ಕೊಲೆ ಸಂಚು ರೂಪಿಸಿದ ಆರೋಪದ ಮೇಲೆ 'ಸ್ಟೈಲ್ ರಾಜ' ಚಿತ್ರದ ನಿರ್ದೇಶಕ ಹರೀಶ್ ಸೇರಿದಂತೆ ನಾಲ್ವರನ್ನ ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಚಿತ್ರಕ್ಕಾಗಿ ಹಣ ನೀಡಿದ್ದ ಅಶೋಕ್ ಎಂಬುವವರನ್ನು ಕೊಲೆ ಮಾಡಲು ಯತ್ನಿಸಿದ ಹಾಗೂ ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಸಿನಿಮಾ ನಿರ್ದೇಶಕ ಹರೀಶ್, ರಾಜಶೇಖರ್, ಸತೀಶ್ ಹಾಗೂ ಸುರೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಶೋಕ್ ಅವರ ಸಂಬಂಧಿಕರ ಬಳಿ ನಿರ್ದೇಶಕ ಹರೀಶ್ ತಮ್ಮ ಚಿತ್ರದ ಕೆಲಸಗಳಿಗಾಗಿ 3.5 ಲಕ್ಷ ಹಣವನ್ನು ಪಡೆದಿದ್ದರಂತೆ. ಸಿನಿಮಾ ಬಿಡುಗಡೆಯಾದರು, ಹಣ ಮಾತ್ರ ಪಾವತಿಸಿರಲಿಲ್ಲ. ಹಣ ಕೇಳಿದರೆ ತಪ್ಪಿಸಿಕೊಂಡು ತಿರುಗುತ್ತಿದ್ದನು. ಹೀಗಾಗಿ, ಹಣಕ್ಕಾಗಿ ಪೀಡಿಸುತ್ತಿದ್ದ ಅಶೋಕ್ ಅವರನ್ನ ಸುಪಾರಿ ಕೊಟ್ಟು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಇತ್ತೀಚೆಗೆ ರೌಡಿ ಸತೀಶ್ ಮತ್ತು ಅವರ ತಂಡ ಅಶೋಕ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಅಶೋಕ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ನಾಲ್ವರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruಬಂಧನಕೊಲೆ ಯತ್ನ ಪ್ರಕರಣAttempt Murder CaseStlye Raja Movie DirectorArresttedಸ್ಟೈಲ್ ರಾಜ ನಿರ್ದೇಶಕ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


