ಅರ್ಜುನ್ ಸರ್ಜಾ 150ನೇ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸವಾಗಿದೆ: ಶೃತಿ ಹರಿಹರನ್
ಅರ್ಜುನ್ ಸರ್ಜಾ ನಟನೆಯ 150ನೇ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಸಿನಿಮಾದ ...

Published On :
ಬೆಂಗಳೂರು: ಅರ್ಜುನ್ ಸರ್ಜಾ ನಟನೆಯ 150ನೇ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಸಿನಿಮಾದ ಭಾಗವಾಗಿರುವುದಕ್ಕೆ ನಟಿ ಶೃತಿ ಹರಿಹರನ್ ಅಪಾರ ಸಂತಸ ವ್ಯಕ್ತ ಪಡಿಸಿದ್ದಾರೆ.
ತಮಿಳು ಮತ್ತು ಕನ್ನಡದಲ್ಲಿ ಸರ್ಜಾ ಅವರ 150 ನೇ ಸಿನಿಮಾ ಈ ವಾರದಲ್ಲಿ ತೆರೆ ಕಾಣಲಿದೆ. ಕನ್ನಡಲ್ಲಿ ವಿಸ್ಮಯಾ ಮತ್ತು ತಮಿಳಿನಲ್ಲಿ ನಿಬುನಮ್ ಹೆಸರಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಅಷ್ಟು ದೊಡ್ಡ ಪ್ರಾಜೆಕ್ಟ್ ನಲ್ಲಿ ನಾನು ಸಣ್ಣ ಭಾಗವಾಗಿರುವುದು ನನಗೆ ಸಂತಸ ತಂದಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಪತ್ನಿ ಪಾತ್ರದಲ್ಲ್ಲಿ ಶೃತಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಪೊಲೀಸ್ ಅಧಿಕಾರಿಯಾಗಿದ್ದು, ಸೇನೆ ಮತ್ತು ಪೊಲೀಸ್ ಕೆಲಸ ಮಾಡುವವರು ಅವರ ಕುಟುಂಬದ ಕಡೆಗೆ ಗಮನ ನೀಡುವುದಿಲ್ಲ ಎಂಬುದು ಶೃತಿಯ ನಂಬಿಕೆಯಾಗಿರುತ್ತದೆ.
ಸಮಾಜ ಅವರನ್ನು ಹೀರೋ ಎಂದು ಕರೆಯುತ್ತದೆ. ಆದರೆ ಮನೆಗೆ ಬಂದಾಗ ಅವರಿಗೆ ತಾಯಿ, ಹೆಂಡತಿ ಹಾಗೂ ಮಕ್ಕಳು ಹೀರೋವನ್ನು ಕಳೆದುಕೊಳ್ಳಬಹುದೆಂಬ ಭಯದಲ್ಲೇ ಬದುಕುತ್ತಿರುತ್ತಾರೆ. ಎಂದು ಹೇಳಿದ್ದಾರೆ.
ಸದ್ಯ ಶೃತಿ ಚೈತನ್ಯ ಅವರ ಮುಂದಿನ ಸಿನಿಮಾದಲ್ಲಿ ಎಸಿಪಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
ತಮಿಳಿನಲ್ಲಿ ಸುಹಾಸಿನಿ, ಸುಧಾರಾಣಿ, ವರಲಕ್ಷ್ಮಿ ಶರತ್ ಕುಮಾರ್ ಮತ್ತು ಪ್ರಸನ್ನ ಅವರು ಅಭಿನಯಿಸಿದ್ದಾರೆ, ನಾನು ಈ ನಟರೆಲ್ಲರ ಅಭಿಮಾನಿ. ಅವರ ಜೊತೆ ನಟಿಸಿರುವುದು ಮತ್ತಷ್ಟು ಖುಷಿ ತಂದಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


