ಗೋವಾದಲ್ಲಿ ಎ.ಪಿ. ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಶೂಟಿಂಗ್
ಗೋವಾ ಹಲವು ಕನ್ನಡ ಸಿನಿಮಾ ನಿರ್ಮಾಪಕರ ಮೆಚ್ಚಿನ ತಾಣವಾಗಿದೆ. 'ಅದ್ದೂರಿ' ನಿರ್ದೇಶಕ ಎ ಪಿ ಅರ್ಜುನ್ ತಮ್ಮ ಮುಂದಿನ ಕಿಸ್ ಸಿನಿಮಾವ...

Published On :
ಬೆಂಗಳೂರು: ಗೋವಾ ಹಲವು ಕನ್ನಡ ಸಿನಿಮಾ ನಿರ್ಮಾಪಕರ ಮೆಚ್ಚಿನ ತಾಣವಾಗಿದೆ. 'ಅದ್ದೂರಿ' ನಿರ್ದೇಶಕ ಎ ಪಿ ಅರ್ಜುನ್ ತಮ್ಮ ಮುಂದಿನ ಕಿಸ್ ಸಿನಿಮಾವನ್ನು ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ.
ಗೋವಾ ಬೀಚ್ ನಲ್ಲಿ ಕಿಸ್ ಸಿನಿಮಾದ ಶೂಟಿಂಗ್ ನಡೆದಿದ್ದು, ಸಿನಿಮಾ ಸ್ಟಿಲ್ ಗಳು ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿವೆ. ವಿರಾಟ್ ಮತ್ತು ಶ್ರೀಲೀಲಾ ಎಂಬ ಹೊಸ ಮುಖಗಳನ್ನು ಕಿಸ್ ಸಿನಿಮಾ ಮೂಲಕ ಪರಿಚಯಿಸುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಹಲವು ಬೀಚ್ ಗಳಿವೆ, ಆದರೆ ಗೋವಾ ಬೀಚ್ ಭವ್ಯವಾಗಿದೆ. ಸಿನಿಮಾ ಕಥೆಯಲ್ಲಿ ನಾಯಕ ಶ್ರೀಮಂತ ಕುಟುಂಬದಿಂದ ಬಂದವನಾಗಿರುತ್ತಾನೆ. ಇದನ್ನು ನಾನು ಉತ್ತಮವಾಗಿ ತರಲು ಪ್ರಯತ್ನಿಸಿದ್ದೇನೆ, ಅದಕ್ಕಾಗಿ ನಾನು ಗೋವಾವನ್ನು ಆಯ್ಕೆ ಮಾಡಿಕೊಂಡೆ ಎಂದು ಅರ್ಜುನ್ ಹೇಳಿದ್ದಾರೆ.
12 ಮಂದಿಯ ಸಿನಿಮಾ ತಂಡ ಶೂಟಿಂಗ್ ಗಾಗಿ 10 ದಿನಗಳ ಕಾಲ ಗೋವಾದಲ್ಲಿರಲಿದೆ, ಕೆಲ ಹಾಡು ಮತ್ತು ಸಂಭಾಷಣೆ ಸನ್ನಿವೇಶಗಳನ್ನು ಚಿತ್ರಿಕರಿಸಲಾಗಿದೆ. ರವಿ ವರ್ಮಾ ನೃತ್ಯ ಸಂಯೋಜನೆ ಮಾಡಿದ್ದಾರೆ.
ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ, ನಂತರ ಊಟಿಯಲ್ಲಿ 10 ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಎಂದು ಹೇಳಿದ್ದಾರೆ. ವಿ. ರವಿಕುಮಾರ್ ನಿರ್ಮಾಣದ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


