'ಸೈರಾತ್' ಮರಾಠಿ ಅದ್ಭುತ ಎಂದ ಬಿಗ್ ಬಿ
೨೦೧೬ ರ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್'ಗೆ ಹೊಸ ಅಭಿಮಾನಿ ಸ್ವಲ್ಪ ತಡವಾಗಿಯಾದರೂ ಸೇರ್ಪಡೆಯಾಗಿದ್ದಾರೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 'ಸೈರಾತ್' ಮರಾಠಿ ಅದ್ಭುತ ಎಂದು

Published On :
ಮುಂಬೈ: ೨೦೧೬ ರ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್'ಗೆ ಹೊಸ ಅಭಿಮಾನಿ ಸ್ವಲ್ಪ ತಡವಾಗಿಯಾದರೂ ಸೇರ್ಪಡೆಯಾಗಿದ್ದಾರೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ 'ಸೈರಾತ್' ಮರಾಠಿ ಅದ್ಭುತ ಎಂದು ಹಾಡಿ ಹೊಗಳಿದ್ದಾರೆ.
"ಒಹ್..! ಮತ್ತು 'ಸೈರಾತ್' ಸಿನೆಮಾ ನೋಡಿದೆ. ಮರಾಠಿ ಅದ್ಭುತ... ಎಂತಹ ಅದ್ಭುತ ಸಿನಿಮೀಯ ಅನುಭವ... ಅಬ್ಬಾ ಅತ್ಯುತ್ತಮ ಚಿತ್ರ" ಎಂದು ಬುಧವಾರ ಅಮಿತಾಬ್ ಟ್ವೀಟ್ ಮಾಡಿದ್ದಾರೆ.
ನಾಗರಾಜ್ ಮಂಜುಳೆ ನಿರ್ದೇಶನ ಈ ಚಿತ್ರ ಎರಡು ಸಮುದಾಯದ-ವರ್ಗದ ಜೋಡಿಯ ಪ್ರೀತಿ ಮತ್ತು ಮದುವೆಗೆ ಒದಗಿ ಬರುವ ಕಷ್ಟಗಳನ್ನು ಚಿತ್ರಿಸಿದೆ. ಮರಾಠಿ ಸಿನೆಮಾಗಳಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಸಿನಿಮಾಗಲ್ಲಿ ಒಂದು 'ಸೈರಾತ್'.
ಕಳೆದ ವರ್ಷ ಏಪ್ರಿಲ್ ೨೯ ಬಿಡುಗಡೆಯಾದ 'ಸೈರಾತ್', 'ಫಂಡ್ರಿ' ನಂತರ ಮಂಜುಳೆ ಅವರ ಎರಡನೇ ಚಿತ್ರವಾಗಿತ್ತು. ೬೧ ನೇ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳಲ್ಲಿ ಮಂಜುಳೆ ಅತ್ಯುತ್ತಮ ನಿರ್ದೇಶನಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ ಕೂಡ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


