ಸುಳ್ಳು ಪೋಷಕರ ಬ್ಲ್ಯಾಕ್ ಮೇಲ್ ಗೆ ನಾನು ಬಲಿಪಶು: ನಟ ಧನುಷ್
ಧನುಷ್ ನಮ್ಮ ಮಗ ಎಂದು ಮೇಲೂರಿನ ದಂಪತಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಟ ಧನುಷ್ ಹಾಜರಾಗಿದ್ದರು. ಈ ವೇಳೆ ಸುಳ್ಳು ಪೋಷಕರ ಬ್ಲ್ಯಾಕ್ ಮೇಲ್ ಗೆ ...

ಮಧುರೈ: ಧನುಷ್ ನಮ್ಮ ಮಗ ಎಂದು ಮೇಲೂರಿನ ದಂಪತಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಟ ಧನುಷ್ ಹಾಜರಾಗಿದ್ದರು. ಈ ವೇಳೆ ಸುಳ್ಳು ಪೋಷಕರ ಬ್ಲ್ಯಾಕ್ ಮೇಲ್ ಗೆ ನಾನು ಬಲಿ ಪಶುವಾಗಿದ್ದೇನೆ ಎಂದು ಮದ್ರಾಸ್ ಹೈಕೋರ್ಟ್ ನ ಮಧುರೈ ನ್ಯಾಯ ಪೀಠಕ್ಕೆ ನಟ ಧನುಷ್ ಹೇಳಿದ್ದಾರೆ.
ಮಧುರೈ ಮೇಲೂರು ನಿವಾಸಿಗಳಾದ ಆರ್.ಕದಿರೇಸನ್(60 ವರ್ಷ) ಮತ್ತು ಕೆ.ಮೀನಾಕ್ಷಿ (55 ವರ್ಷ) ಎಂಬುವರು ನಟ ಧನುಷ್ ತಮ್ಮ ಹಿರಿಯ ಮಗ, ಅವನು ಚಿತ್ರರಂಗ ಸೇರಿದ ಮೇಲೆ ನಮ್ಮನ್ನು ಮರೆತು ಬಿಟ್ಟಿದ್ದಾನೆ, ತಾವು ತುಂಬಾ ಕಷ್ಟದಲ್ಲಿದ್ದು, ಆತನಿಂದ ಸಹಾಯ ಕೊಡಿಸುವಂತೆ ದಂಪತಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
1985ರ ನವೆಂಬರ್ 7ರಂದು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ. ಶಿವಗಂಗಾದಲ್ಲಿ 11ನೇ ತರಗತಿವರೆಗೂ ಶಿಕ್ಷಣ ಪಡೆದಿದ್ದವನು, ಶಾಲೆ ಬಿಟ್ಟು ನಟನೆಗಾಗಿ ಧನುಷ್ ಕೆ.ರಾಜಾ ಎಂದು ಹೆಸರು ಬದಲಿಸಿಕೊಂಡು ಚೆನ್ನೈ ಸೇರಿದ. ಸಿನಿಮಾ ಸ್ಟಾರ್ ಆದನಂತರ ಆತ ನಮ್ಮನ್ನು ಸಂಪರ್ಕಿಸಿಲ್ಲ ಎಂದು ದಂಪತಿ ನೀಡಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ, ನನ್ನನ್ನು ಅವರ ಮಗ ಎಂದು ಹೇಳುತ್ತಿರುವ ದಂಪತಿ, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ತೋರಿಸಲು ವಿಫಲರಾಗಿದ್ದಾರೆ ಎಂದು ಧನುಷ್ ತಿಳಿಸಿದ್ದಾರೆ.
ನಾನೊಬ್ಬ ಗೌರವಾನ್ವಿತ ನಟನಾಗಿದ್ದು, ಎಗ್ಮೋರೆಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 28 1983 ರಲ್ಲಿ ಜನಿಸಿದ್ದೇನೆ. ಕೃಷ್ಣಮೂರ್ತಿ ಮತ್ತು ವಿಜಯಲಕ್ಷ್ಮಿ ನನ್ನ ತಂದೆತಾಯಿ ಎಂದು ಧನುಷ್ ಸ್ಪಷ್ಟ ಪಡಿಸಿದ್ದಾರೆ.
ನನ್ನ ಮೊದಲ ಹೆಸರು ವೆಂಕಟೇಶ್ ಪ್ರಭು. 2003 ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ನಂತರ ಧನುಷ್ ಕೆ. ರಾಜಾ ಎಂದು ಬದಲಾಯಿತು. ಮೇಲೂರು ದಂಪತಿಯದ್ದು ಬ್ಲ್ಯಾಕ್ ಮೇಲ್ ಕೇಸ್ ಎಂದು ಧನುಷ್ ತಿಳಿಸಿದ್ದಾರೆ.
ಈ ಮೊದಲು ಹಲವು ಸೆಲಬ್ರಿಟಿಗಳ ವಿರುದ್ಧ ಸುಳ್ಳು ಕೇಸುಗಳು ದಾಖಲಾಗಿರುವ ಉದಾಹರಣೆಗಳಿವೆ. ನಟಿ ಶ್ರೀದೇವಿ ವಿರುದ್ಧ ಕೂಡ ಇದೇ ರೀತಿಯ ಸುಳ್ಳು ಕೇಸು ದಾಖಲಾಗಿತ್ತು. ಈಗ ನನ್ನ ಸರದಿ ಎಂದು ಧನುಷ್ ಅಭಿಪ್ರಾಯ ಪಟ್ಟಿದ್ದಾರೆ. ನ್ಯಾಯಾಲಯ ಯಾಂತ್ರಿಕವಾಗಿ ದೂರು ದಾಖಲಿಸಿಕೊಂಡು ಸಮನ್ಸ್ ನೀಡಿದೆ.
ಇಂತಹ ಪ್ರಕರಣಗಳಲ್ಲಿ ಖುದ್ದು ಹಾಜರಾತಿಗೆ ನ್ಯಾಯಾಲಯ ಸೂಚಿಸುವ ಮೊದಲು ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಬೇಕು, ಜೊತೆಗೆ ದೂರನ್ನು ವಜಾಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


