ಸಿನಿಮಾ ಸುದ್ದಿ

19 ವರ್ಷಗಳ ನಂತರ ಮತ್ತೆ ಒಂದಾದ 'ಎ' ಸಿನಿಮಾ ಜೋಡಿ ಚಾಂದಿನಿ-ಉಪೇಂದ್ರ

ಉಪೇಂದ್ರ ಮತ್ತೆ ಹುಟ್ಟಿಬಾ ಸಿನಿಮಾದಲ್ಲಿ ಹಲವು ವೈಶಿಷ್ಟ್ಯಗಳಿವೆ, 17 ವರ್ಷದ ನಂತರ ಪ್ರೇಮಾ ಮತ್ತು ಉಪೇಂದ್ರ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಜೊತೆಗೆ ...

19 ವರ್ಷಗಳ ನಂತರ ಮತ್ತೆ ಒಂದಾದ 'ಎ' ಸಿನಿಮಾ ಜೋಡಿ ಚಾಂದಿನಿ-ಉಪೇಂದ್ರ
ಚಾಂದಿನಿ
Published On :

ಬೆಂಗಳೂರು: ಉಪೇಂದ್ರ ಮತ್ತೆ ಹುಟ್ಟಿಬಾ ಸಿನಿಮಾದಲ್ಲಿ ಹಲವು ವೈಶಿಷ್ಟ್ಯಗಳಿವೆ, 17 ವರ್ಷದ ನಂತರ ಪ್ರೇಮಾ ಮತ್ತು ಉಪೇಂದ್ರ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಜೊತೆಗೆ 19 ವರ್ಷಗಳ ನಂತರ ಎ ಸಿನಿಮಾ ನಾಯಕಿ ಚಾಂದಿನಿ ಮತ್ತು ಉಪೇಂದ್ರ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ಹೈಲೈಟ್.

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತನ್ನದೇ ಸ್ಥಾನ ಕಂಡುಕೊಳ್ಳಲು ಚಾಂದಿನಿಗೆ ಸಹಾಯವಾದದ್ದು ಎ  ಸಿನಿಮಾ. ಈಗ ಉಪೇಂದ್ರ ಮತ್ತೆ ಹುಟ್ಟಿ ಬಾ ಚಿತ್ರದಲ್ಲಿ ಚಾಂದಿನಿ-ಉಪೇಂದ್ರ ಒಂದಾಗುತ್ತಿದ್ದಾರೆ.
ಆದರೆ ಈ ಸಂಬಂಧ ಸಿನಿಮಾ ತಯಾರಕರು ಮತ್ತು ಎಲ್ಲೂ ತುಟಿ ಬಿಚ್ಚಿಲ್ಲ.

ಈ ಸಿನಿಮಾದಲ್ಲಿ ಚಾಂದಿನಿ ಅತಿಥಿ ಪಾತ್ರ ನಿರ್ವಹಿಸುತ್ತಿದ್ದರು ಅವರಿಗಾಗಿ ಒಂದು ವಿಶೇಷ ಹಾಡನ್ನು ಸಿದ್ಧಪಡಿಸಲಾಗುತ್ತಿದೆ. ಸಿನಿಮಾದ ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಚಾಂದಿನಿ ಅಭಿನಯದ ಭಾಗವನ್ನು ಮುಂದಿನ ತಿಂಗಳಲ್ಲಿ ಚಿತ್ರೀಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶೃತಿ ಹರಿಹರನ್, ಹರ್ಶಿಕಾ ಪೂಣಚ್ಚ ನಟಿಸಿದ್ದಾರೆ. ತೆಲುಗಿನ ಸೊಗ್ಗಾದೆ ಚಿನ್ನಿ ನಯನ ಸಿನಿಮಾದ ರಿಮೇಕ್ ಆಗಿದೆ. ಆದರೆ ಕನ್ನಡ ಸಿನಿಮಾರಂಗಕ್ಕೆ ಒಗ್ಗುವಂತೆ ನಟ ಉಪೇಂದ್ರ ಅವರೇ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.