ಸುದೀಪ್ ನಟನೆಯ ಹೆಬ್ಬುಲಿ ಹೊಸ ದಾಖಲೆ: ಕರ್ನಾಟಕದಾದ್ಯಂತ 400 ಥಿಯೇಟರ್ ಗಳಲ್ಲಿ ರಿಲೀಸ್
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, 400 ಥಿಯೇಟರ್ ಗಳಲ್ಲಿ ...

ಬೆಂಗಳೂರು: ನೆಚ್ಚಿನ ನಟನ ಸಿನಿಮಾದ ಮೊದಲ ದಿನದ ಪ್ರದರ್ಶನ ನೋಡಲು ಸಾಧ್ಯವಾಗಲಿಲ್ಲ ಎಂದು ಅಭಿಮಾನಿಗಳು ನಿರಾಸೆ ಪಡುವಂತಿಲ್ಲ, ಏಕೆಂದರೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, 400 ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.
ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ 400 ಥಿಯೇಟರ್ ಗಳಲ್ಲಿ ಹೆಬ್ಬುಲಿ ಬಿಡುಗಡೆಯಾಗಲಿದೆ, ಮಧ್ಯರಾತ್ರಿ ಶೋ ನೋಡುವ ಅಭಿಮಾನಿಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯ ಕೂಡ ಒದಗಿಸಲಾಗಿದೆ ಎಂದು ಸಿನಿಮಾ ವಿತರಕ ಜಾಕ್ ಮಂಜು ಹೇಳಿದ್ದಾರೆಯ
ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಬ್ಬುಲಿ ಸಿನಿಮಾ 17 ರಿಂದ 18 ಪ್ರದರ್ಶನ ಗೊಳ್ಳಲಿದೆ. ರಾಜ್ಯದ ಪ್ರತಿ ಥಿಯೇಟರ್ ನಲ್ಲೂ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕದ ಬಳ್ಳಾರಿ, ಹೊಸಪೇಟೆ, ದಾವಣಗೆರೆ ಮತ್ತು ಶಿವಮೊಗ್ಗಗಳಲ್ಲಿ ಮಧ್ಯರಾತ್ರಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಬೆಳಗ್ಗಿನ ಜಾವ 4 ಗಂಟೆ ಶೋ ವೀಕ್ಷಿಸಬಹುದಾಗಿದೆ.
ಭಾರತದಾದ್ಯಂತ ಶುಕ್ರವಾರ 30 ಥಿಯೇಟರ್ ಗಳಲ್ಲಿ ಹೆಬ್ಬುಲಿ ಪ್ರದರ್ಶನಗೊಳ್ಳಲಿದೆ. ಹೈದರಾಬಾದ್, ಚೆನ್ನೈ, ಮುಂಬಯಿ, ದೆಹಲಿ, ಕೊಚ್ಚಿ ಮತ್ತು ಅಹಮದಾಬಾದ್ ಗಳಲ್ಲಿ ಹೆಬ್ಬುಲಿ ರಿಲೀಸ್ ಆಗಲಿದೆ.
ಮೆಜಸ್ಟಿಕ್ ನಲ್ಲಿರುವ ಸಂತೋಷ್ ಥಿಯೇಟರ್ ಬಳಿ ಮಂಗಳೂರಿನ ಹುಲಿ ವೇಷ ತಂಡ ಮೊದಲ ದಿನ ಪ್ರದರ್ಶನ ತೋರಲಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


