ಸಿನಿಮಾ ಸುದ್ದಿ

ನಟಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನನ್ನು ಗುಂಡಿಟ್ಟು ಕೊಲ್ಲ ಬೇಕು ಎಂದ ಕಿಚ್ಚಾ ಸುದೀಪ್!

ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಖ್ಯಾತ ನಟ ಕಿಚ್ಚಾ ಸುದೀಪ್ , ಕಾಮುಕರನ್ನು ಗುಂಡಿಟ್ಟು ಕೊಲ್ಲ ಬೇಕು ಎಂದು ಹೇಳಿದ್ದಾರೆ.

ನಟಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನನ್ನು ಗುಂಡಿಟ್ಟು ಕೊಲ್ಲ ಬೇಕು ಎಂದ ಕಿಚ್ಚಾ ಸುದೀಪ್!
ಸುದೀಪ್-ಭಾವನಾ ಅಭಿನಯದ ಬಚ್ಚನ್ ಚಿತ್ರ
Published On :

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಖ್ಯಾತ ನಟ ಕಿಚ್ಚಾ ಸುದೀಪ್ , ಕಾಮುಕರನ್ನು ಗುಂಡಿಟ್ಟು ಕೊಲ್ಲ ಬೇಕು ಎಂದು  ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ನಾನು ಕೇಳಿದ ಸುದ್ದಿ ನಿಜವೇ ಆಗಿದ್ದರೆ ಖಂಡಿತಾ ಆ ಕಾಮುಕರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ್ದಾರೆ. "ತನಗಾದ ನೋವು ಏನು ಎಂದು ಆ ಮಹಿಳೆಗೆ  ಮಾತ್ರ ತಿಳಿದಿರುತ್ತದೆ. ನಾನು ಕೇಳಿದ ಸುದ್ದಿ ಸತ್ಯವೇ ಆಗಿದ್ದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದ್ದರೆ ಖಂಡಿತಾ ಆ ಕಾಮುಕನನ್ನು ಗುಂಡಿಟ್ಟು ಕೊಲ್ಲಬೇಕು. ಪರ ಸ್ತ್ರೀಯರನ್ನು ಗೌರವದಿಂದ  ಕಾಣದವನು ತನ್ನ ತಾಯಿಗೂ ಗೌರವ ಕೊಡುವುದಿಲ್ಲ. ಇದು ಕೇವಲ ಓರ್ವ ನಟಿ ಎಂದಷ್ಟೇ ಅಲ್ಲ ಓರ್ವ ಮಹಿಳೆಗೆ ಆದ ನೋವಿಗಾಗಿ ನಾನ ಪ್ರತಿಕ್ರಿಯಿಸುತ್ತಿದ್ದೇನೆ. ಆದರೂ ಆ ನೋವು ಅನುಭವಿಸಿದ ಮಹಿಳೆಗಷ್ಟೇ ತಾನು ಎಂತಹ  ಪರಿಸ್ಥಿತಿಯಲ್ಲಿದ್ದೇನೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಚಿತ್ರೀಕರಣ ಮುಗಿಸಿಕೊಂಡು ರಾತ್ರಿ ಮನೆಗೆ ವಾಪಸಾಗುತ್ತಿದ್ದ ನಟಿ ಭಾವನಾ ಅವರನ್ನು ಮಾರ್ಗ ಮಧ್ಯೆ ಅಪಹರಣ ಮಾಡಿದ ಹಾಲಿ ಮತ್ತು ಮಾಜಿ ಚಾಲಕರು ದುಷ್ಕರ್ಮಿಗಳ ನೆರವಿನಿಂದ ಆಕೆಯ ಮೇಲೆ ಕಾರಿನಲ್ಲೇ ಲೈಂಗಿಕ  ದೌರ್ಜನ್ಯವೆಸಗಿ ಪರಾರಿಯಾಗಿದ್ದರು. ಸ್ಥಳೀಯ ಓರ್ವ ನಿರ್ದೇಶಕನ ನೆರವಿನಿಂದ ನಟಿ ಭಾವನಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಹಾಲಿ ಚಾಲಕ ಮಾರ್ಟಿನ್ ಮತ್ತು ಮಾಜಿ ಚಾಲಕ ಮತ್ತು ಪ್ರಕರಣದ  ಮಾಸ್ಚರ್ ಮೈಂಡ್ ಪಲ್ಸರ್ ಸುನಿ ಎಂಬುವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ತಲೆ ಮರೆಸಿಕೊಂಡಿರುವ ಇತರೆ ನಾಲ್ಕು ಮಂದಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.