ಸಿನಿಮಾ ಸುದ್ದಿ

ಮುನಿರತ್ನ ಅವರ ಮುಂದಿನ ಸಿನಿಮಾ ಚಾಣಕ್ಯ ಚಂದ್ರಗುಪ್ತ

ಕುರುಕ್ಷೇತ್ರ ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ಮುನಿರತ್ನ ಅವರ ಮುಂದಿನ ....

ಮುನಿರತ್ನ ಅವರ ಮುಂದಿನ ಸಿನಿಮಾ ಚಾಣಕ್ಯ ಚಂದ್ರಗುಪ್ತ
ಪುನೀತ್ ರಾಜ್ ಕುಮಾರ್, ಉಪೇಂದ್ರ, ಸುದೀಪ್
Published On :
ಕುರುಕ್ಷೇತ್ರ ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ಮುನಿರತ್ನ ಅವರ ಮುಂದಿನ ಚಿತ್ರ ಕೂಡ ಐತಿಹಾಸಿಕ ಕಥೆಯನ್ನಾದರಿಸಿದ್ದಂತೆ. ಇದು ಕೂಡ ಭಾರೀ ಬಜೆಟ್ ನ ಚಿತ್ರವಾಗಿದ್ದು ಚಾಣಕ್ಯ ಚಂದ್ರಗುಪ್ತ ಎಂದು ಹೆಸರಿಡಲಾಗಿದೆ.
ಈ ಬಗ್ಗೆ ಸ್ವತಃ ಮುನಿರತ್ನ ಅವರೇ ಮಾಧ್ಯಮದ ಕೆಲ ಪ್ರತಿನಿಧಿಗಳಿಗೆ ಇತ್ತೀಚೆಗೆ ಅನೌಪಚಾರಿಕವಾಗಿ ಘೋಷಣೆ ಮಾಡಿದ್ದಾರಂತೆ. ಚಿತ್ರದ ಕಥೆ ಹೆಣೆಯಲಾಗುತ್ತಿದ್ದು ನಿರ್ದೇಶಕರನ್ನು ಕೂಡ ಹುಡುಕುತ್ತಿದ್ದಾರಂತೆ. ಕ್ರಿಸ್ತಪೂರ್ವ 3ನೇ ಶತಮಾನದ ಮೌರ್ಯ ದೊರೆ ಚಂದ್ರಗುಪ್ತ ಮತ್ತು ಅವನ ಸಲಹೆಗಾರ ಗುರು ಚಾಣಕ್ಯ, ನಂದ ರಾಜವಂಶ, ಅಲೆಕ್ಸಾಂಡರ್ ದೊರೆ ಮತ್ತು ಮೌರ್ಯ ಸಾಮ್ರಾಜ್ಯದ ಸ್ಥಾಪನೆ ಕುರಿತು ಚಿತ್ರ ತಯಾರಿಸಲಿದ್ದಾರಂತೆ.
Story image
1977ರಲ್ಲಿ ತೆಲುಗಿನಲ್ಲಿ ತೆರೆಕಂಡ ಚಿತ್ರದ ಶೀರ್ಷಿಕೆಯನ್ನೇ ಕನ್ನಡಕ್ಕೆ ಕೂಡ ತರಲಾಗುತ್ತಿದ್ದು, ಅದರಲ್ಲಿ ಎನ್.ಟಿ.ರಾಮ ರಾವ್ ನಟಿಸಿ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಶಿವಾಜಿ ಗಣೇಶನ್ ಅವರ ಜೊತೆ ನಿರ್ದೇಶಿಸಿದ್ದರು. ಈ ಮೆಗಾ ಪ್ರಾಜೆಕ್ಟ್ ನಲ್ಲಿ ನಟಿಸುವ ಸ್ಟಾರ್ ನಟರನ್ನು ಅವರು ಆಲೋಚನೆ ಮಾಡಿಕೊಂಡಿದ್ದಾರೆ. ಚಾಣಿಕ್ಯನಾಗಿ ಉಪೇಂದ್ರ, ಚಂದ್ರಗುಪ್ತನಾಗಿ ಪುನೀತ್ ರಾಜ್ ಕುಮಾರ್ ಮತ್ತು ಅಲೆಕ್ಸಾಂಡರ್ ಪಾತ್ರದಲ್ಲಿ ಸುದೀಪ್ ಅವರನ್ನು ತರಲು ಯೋಚಿಸಿದ್ದಾರೆ. ಅಲ್ಲದೆ ಸಿನಿಮಾ ಕುರಿತು ಈ ನಟರ ಜೊತೆ ಮಾತುಕತೆಗೆ ಕೂಡ ಮುಂದಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.