ಸಿನಿಮಾ ಸುದ್ದಿ

ಅಂತಿಮ ಹಂತದಲ್ಲಿ ಕುರುಕ್ಷೇತ್ರ: ಮಾ.9ಕ್ಕೆ ಬಿಡುಗಡೆ ಸಾಧ್ಯತೆ

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಿನಿಮಾ ಎಂದೇ ಖ್ಯಾತಿಗಳಿಸುತ್ತಿರುವ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಅಂತಿಮ ಹಂತವನ್ನು ತಲುಪಿದ್ದು, ಮಾ.9 ಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

ಅಂತಿಮ ಹಂತದಲ್ಲಿ ಕುರುಕ್ಷೇತ್ರ: ಮಾ.9ಕ್ಕೆ ಬಿಡುಗಡೆ ಸಾಧ್ಯತೆ
ಕುರುಕ್ಷೇತ್ರ
Published On :
ಕನ್ನಡ ಚಿತ್ರರಂಗದ ಪ್ರತಿಷ್ಠಿತ ಸಿನಿಮಾ ಎಂದೇ ಖ್ಯಾತಿಗಳಿಸುತ್ತಿರುವ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ಅಂತಿಮ ಹಂತವನ್ನು ತಲುಪಿದ್ದು, ಮಾ.9 ಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಈಗಾಗಲೇ ಕುರುಕ್ಷೇತ್ರ ಚಿತ್ರ ಅಂತಿಮ ಚಿತ್ರೀಕರಣ ನಡೆಯುತ್ತಿದ್ದು, ಜನವರಿ 5 ರೊಳಗಾಗಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಚಿತ್ರ ಗ್ರಾಫಿಕ್ ಡಿಸೈನ್ ಬಾಕಿಯಿದ್ದು, ಫೆ.10 ರೊಳಗೆ ಈ ಕಾರ್ಯಗಳು ಪೂರ್ಣಗೊಳ್ಳಲಿದೆ. ಮಾರ್ಚ್ 2ರ ವೇಳೆಗೆ ಚಿತ್ರದ ಸೆನ್ಸಾರ್ ಮಾಡಿಸಿ, ಮಾರ್ಚ್ 9ರ ವೇಳೆಗೆ ಚಿತ್ರ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. 
ಕುರುಕ್ಷೇತ್ರ ಚಿತ್ರದಲ್ಲಿ ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ, ಚಿತ್ರದ ತಂಡದೊಂದಿಗೆ ಡಾ.ನಾಗೇಂದ್ರ ಪ್ರಸಾದ್ ಕೂಡ ಕೈ ಜೋಡಿಸಿದ್ದಾರೆ. ನಿರ್ದೇಶಕ ನಾಗಣ್ಣ ಅವರೊಂದಿಗೆ ಕೈಜೋಡಿಸಿರುವ ಅವರು, ಚಿತ್ರೀಕರಣ ನಂತರ ಕೆಲಸಗಳನ್ನು ನೋಡಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬೇರೆ ಬೇರೆ ಯುನಿಟ್ ಗಳು ಇರುವುದರಿಂದ ನಾಗೇಂದ್ರ ಅವರ ಸಹಕಾರದ ಅಗತ್ಯವಿತ್ತು ಎಂದು ನಿರ್ಮಾಪಕ ಮುನಿರತ್ನ ಅವರು ಹೇಳಿದ್ದಾರೆ. 
ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಕನ್ನಡದ ದಿಗ್ಗಜರಾದ ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ನಿಖಿಲ್ ಕುಮಾರ್, ದಾನಿಶ್ ಸೈಫಿ ಅಖ್ತರ್, ಮೇಘನಾ ರಾಜ್, ಸ್ನೇಹ, ಹರಿಪ್ರಿಯ ಹಲವರು ನಟ-ನಟಿಯವರು ಅಭಿನಯಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.