ಸಿನಿಮಾ ಸುದ್ದಿ

ವಿವಿಧ ಧರ್ಮಗಳನ್ನು ಗೌರವಿಸುವುದೇ ಜಾತ್ಯಾತೀತತೆ: ಅನಂತ್ ಕುಮಾರ್ ಹೆಗ್ಡೆಗೆ ಪ್ರಕಾಶ್ ರೈ ಪತ್ರ ಪ್ರಹಾರ!

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಜ್ಯಾತ್ಯಾತೀತ ಹೇಳಿಕೆ ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದು, ಜಾತ್ಯಾತೀತ ಎಂದರೆ ವಿವಿಧ ಧರ್ಮಗಳನ್ನು ಗೌರವಿಸುವುದು ಎಂದು ಪಾಠ ಮಾಡಿದ್ದಾರೆ.

ವಿವಿಧ ಧರ್ಮಗಳನ್ನು ಗೌರವಿಸುವುದೇ ಜಾತ್ಯಾತೀತತೆ: ಅನಂತ್ ಕುಮಾರ್ ಹೆಗ್ಡೆಗೆ ಪ್ರಕಾಶ್ ರೈ ಪತ್ರ ಪ್ರಹಾರ!
ಫೇಸ್ ಬುಕ್ ಚಿತ್ರ
Published On :
ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಜ್ಯಾತ್ಯಾತೀತ ಹೇಳಿಕೆ ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದು, ಜಾತ್ಯಾತೀತ  ಎಂದರೆ ವಿವಿಧ ಧರ್ಮಗಳನ್ನು ಗೌರವಿಸುವುದು ಎಂದು ಪಾಠ ಮಾಡಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ಪತ್ರವೊಂದನ್ನು ಬರೆದಿರುವ ನಟ ಪ್ರಕಾಶ್ ರೈ, ಹೆಗ್ಡೆ ಅವರ ಜ್ಯಾತ್ಯಾತೀತ ಹೇಳಿಕೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದಾರೆ. ಓರ್ವ ಜನಪ್ರತಿನಿಧಿಯಾಗಿ ಇಂತಹ ಶಬ್ದಗಳು  ನಿಮಗೆ ಶೋಭೆ ತರುವುದಿಲ್ಲ. ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟುಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ತಮ್ಮ ಪತ್ರವನ್ನು ಪೋಸ್ಟ್ ಮಾಡಿರುವ ನಟ ರೈ, "ಜಾತ್ಯತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಸಿಕೊಳ್ಳುವುದಾಗಿದೆ. ಜಾತ್ಯತೀತ ಎಂದರೆ  ಯಾವುದೇ ಧರ್ಮ ಅಥವಾ ನಂಬಿಕೆಯ ಜೊತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ. ಒಬ್ಬನ ಪೋಷಕರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು  ಮಾಡಿದೆ. ಮನುಷ್ಯನ ರಕ್ತ ಆತನ ಧರ್ಮ ಮತ್ತು ಜಾತಿಯನ್ನು ನಿರ್ಧರಿಸುವುದಿಲ್ಲ. ಅಂತೆಯೇ ಜ್ಯಾತ್ಯಾತೀತ ಎಂದಾಕ್ಷಣ ಆತ ಯಾವುದೇ ಧರ್ಮ ಜಾತಿಗೆ ಸೇರದವನಲ್ಲ ಎಂದೂ ಅಲ್ಲ. ಜ್ಯಾತ್ಯಾತೀತ ಎನ್ನುವುದು ತನ್ನ ಇತರೆ  ಧರ್ಮಗಳನ್ನು ಗೌರವಿಸುವುದಾಗಿದೆ ಎಂದು ರೈ ಕಿಡಿಕಾರಿದ್ದಾರೆ.
ಈ ಹಿಂದೆ ಕೊಪ್ಪಳದಲ್ಲಿ ನಡೆದ ಬ್ರಾಹ್ಮಣ ಯುವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, "ಕೆಲವು ಜನ ಸಂವಿಧಾನದಲ್ಲಿ ಜಾತ್ಯತೀತ ಎಂದು ನಮೂದಿಸಲಾಗಿದೆ  ಎಂದು ಹೇಳುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪದವಿರುವ ಕಾರಣ ಅದನ್ನು ಬಿಜೆಪಿ ಗೌರವಿಸುತ್ತದೆ. ನಾವು ಮುಂದಿನ ದಿನಗಳಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ. ಈ ಹಿಂದೆ ಸಂವಿಧಾನವನ್ನು ಹಲವು ಬಾರಿ  ಬದಲಾಯಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.