ನಟ ಪ್ರಕಾಶ್ ರೈ ಗೆ ಬಿಗ್ ಬಾಸ್ ವಿನ್ನರ್ 'ಒಳ್ಳೆ ಹುಡ್ಗ ಪ್ರಥಮ್' ಓಪನ್ ಚಾಲೆಂಜ್!
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿರುವ ಖ್ಯಾತ ನಟ ಪ್ರಕಾಶ್ ರೈ ಅವರಿಗೆ ಸ್ಯಾಂಡಲ್ ವುಡ್ ನಟ ಒಳ್ಳೆ ಹುಡ್ಗ ಪ್ರಥಮ್ ಸಾಮಾಜಿಕ ತಾಣಗಳಲ್ಲಿ ಬಹಿರಂಗ ಸವಾಲೆಸೆದಿದ್ದಾರೆ.

Published On :
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗಿರುವ ಖ್ಯಾತ ನಟ ಪ್ರಕಾಶ್ ರೈ ಅವರಿಗೆ ಸ್ಯಾಂಡಲ್ ವುಡ್ ನಟ ಒಳ್ಳೆ ಹುಡ್ಗ ಪ್ರಥಮ್ ಸಾಮಾಜಿಕ ತಾಣಗಳಲ್ಲಿ ಬಹಿರಂಗ ಸವಾಲೆಸೆದಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಬಗ್ಗೆ ಸರಣಿ ಹೇಳಿಕೆಗಳನ್ನು ಬಿಡುಗಡೆ ಮಾಡುವ ಸೋ ಕಾಲ್ಡ್ ದೊಡ್ಡ ನಟ ಪ್ರಕಾಶ್ ರೈ ಅವರಿಗೆ ರಾಜ್ಯದ ಹೊನ್ನಾವರದಲ್ಲಿ ನಡೆದ ಕೋಮುಗಲಭೆ ಹಾಗೂ ಪರೇಶ್ ಮೇಸ್ತಾ ಎಂಬ ಯುವಕ ಸಾವು ಕಾಣುವುದಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ.
"ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈ ಅವರಿಗೆ ಬಹಿರಂಗ ಪ್ರಶ್ನೆ, ಏನ್ರೀ ಪ್ರಕಾಶ್ ರಾಜ್ so called ದೊಡ್ಡ ನಟ?!. ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ ಈ ದೇಶದಲ್ಲಿ ಏನಾಗ್ತಿದೆ? ಅದು ಇದು ಅಂತ ಬಾಯಿಗೆ ಬಂದ ಹಾಗೆ ಎಲ್ಲಾ ಕೇಳಿ ಕೊನೆಗೆ ಜಸ್ಟ್ #just_asking ಅಂತಿದ್ರಿ.. ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ. ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ So Called ದೊಡ್ಡ ನಟ (ಭಯಂಕರ)? ನರಕ ಅಂದರೆ ಏನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು.. ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ? ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ್ ರೈ ನಿಮಗೆ? ನಾನು ಹಿಂದು-ಮುಸ್ಲಿಂ ಅಂತ ಮಾತನಾಡುತ್ತಿಲ್ಲ. ಮಾನವೀಯತೆ, ಮನುಷ್ಯತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ಇದು ಬರಿ just asking ಅಲ್ಲ, #purposefully_asking ಎಂದು ತಮ್ಮ ಪೋಸ್ಟ್ ನಲ್ಲಿ ಬರೆದು ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುಫೇಸ್ ಬುಕ್BengaluruSandalwoodಸ್ಯಾಂಡಲ್ ವುಡ್ಪ್ರಕಾಶ್ ರೈprakash Raiಪ್ರಥಮ್Prathamಗೌರಿ ಲಂಕೇಶ್ ಕೊಲೆGouri Lankesh murderFacebbok
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


