'ಸಾಹೇಬ' ನನ್ನ ಸಹೋದರಿ ಮನಸ್ಸು ಗೆದ್ದಿದೆ, ನನಗೆ ಅಷ್ಟೇ ಸಾಕು: ಮನೋರಂಜನ್ ರವಿಚಂದ್ರನ್
ಸಾಹೇಬ ಸಿನಿಮಾ ಬಿಡುಗಡೆಗೆ ಅನಿಮಲ್ ವೆಲ್ ಫೇರ್ ಮಂಡಳಿ ಎನ್ ಒಸಿ ಪ್ರಮಾಣ ಪತ್ರ ನೀಡಿದೆ. ಹೀಗಾಗಿ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ...

Published On :
ಬೆಂಗಳೂರು: ಸಾಹೇಬ ಸಿನಿಮಾ ಬಿಡುಗಡೆಗೆ ಅನಿಮಲ್ ವೆಲ್ ಫೇರ್ ಮಂಡಳಿ ಎನ್ ಒಸಿ ಪ್ರಮಾಣ ಪತ್ರ ನೀಡಿದೆ. ಹೀಗಾಗಿ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಸಾಹೇಬ ಸಿನಿಮಾ ಸೆನ್ಸಾರ್ ಬೋರ್ಡ್ಗೆ ತಲುಪಿದೆ.
ಸಿನಿಮಾ ಬಿಡುಗಡೆಯಾಗಿ ಮೊದಲ ದಿನ ಮೊದಲ ಶೋ ನನ್ನ ಜೊತೆಯಲ್ಲಿಯೋ ನೋಡುವಂತೆ, ಅಲ್ಲಿಯವರೆಗೂ ನೋಡದಂತೆ ತನ್ನ ತಂದೆ ರವಿಚಂದ್ರನ್ ಗೆ ಮನೋರಂಜನ್ ತಿಳಿಸಿದ್ದಾರೆ.
ಸಾಹೇಬ ಸಿನಿಮಾವನ್ನು ಮನೋರಂಜನ್ ಸಹೋದರ ವಿಕ್ರಮ್ ಮತ್ತು ಸಹೋದರಿ ಗೀತಾಂಜಲಿ ವೀಕ್ಷಿಸಿದ್ದಾರೆ. ಇಬ್ಬರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನನ್ನ ಸಹೋದರಿ ಬಹು ದೊಡ್ಡ ವಿಮರ್ಶಕಿ, ಮೊದಲ ಬಾರಿ ಆಕೆ ನನ್ನ ಹೊಸ ಹಾಡು ನೋಡಿ, ಕ್ಯಾಮೆರಾ ಬಗ್ಗೆ ತುಂಬಾ ಕಾನ್ಸ್ಯಿಯಸ್ ಆಗಿದ್ದೀಯಾ ಎಂದು ಹೇಳಿದ್ದಳು. ಆದರೆ ಪೂರ್ಣ ಸಿನಿಮಾ ನೋಡಿ ಸಾಹೇಬ ಸಿನಿಮಾವನ್ನು ಮೆಚ್ಚಿದ್ದಾಳೆ.
ಅಂತಿಮವಾಗಿ ತೆರೆಯ ಮೇಲೆ ನನ್ನನ್ನು ನೋಡಿದ ನನ್ನ ಸಹೋದರ ವಿಕ್ರಮ್ ಖುಷಿಯಾಗಿದ್ದಾನೆ. ಅವನು ಇನ್ನೂ ಸಿನಿಮಾ ರಿಲೀಸ್ ಬಿಡುಗಡೆ ಡೇಟ್ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.
ವಿಕ್ರಮ್ ರವಿಚಂದ್ರನ್ ಕೂಡ ನಾಗಶೇಖರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ನಾವು ಸಿನಿಮಾ ಬಗ್ಗೆ ಮಾತನಾಡುತ್ತಿದ್ದೇವೆ. ನಾವಿಬ್ಬರೂ ಸ್ನೇಹಿತರಂತಿದ್ದೇವೆ, ವಿಕ್ರಮ್ ಹುಟ್ಟಿದಾಗಿನಿಂದ ನನ್ನ ತಂದೆಯಂತೆ ಟೆಕ್ನಿಶಿಯನ್ ಆಗಿದ್ದಾನೆ, ಸಿನಿಮಾದಲ್ಲಿ ಕೆಲಸ ಮಾಡುವ ನಿರ್ಧಾರವನ್ನು ನಮ್ಮ ತಂದೆ ನಮಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಸಾಹೇಬ ಸಿನಿಮಾ ರಿಲೀಸ್ ದಿನಾಂಕವನ್ನು ನಿರ್ದೇಶಕ ಭರತ್ ಹಾಗೂ ನಿರ್ಮಾಪಕ ಜಯಣ್ಣ ತಿಳಿಸಲಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


