ಕಂಟ್ರಿ ಪಿಸ್ತೂಲ್ ಗೆ ಸಿಕ್ಕ ಹೊಸ ನಾಯಕ ಸೂರ್ಯನ್
ಕಂಟ್ರಿ ಪಿಸ್ತೂಲ್ ಸಿನಿಮಾ ಬಗ್ಗೆ ಈ ಮೊದಲು ಹಲವು ಸುದ್ದಿಗಳು ಕೇಳಿ ಬಂದಿದ್ದವು. ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ನಾಯಕನಾಗಿ ...

Published On :
ಬೆಂಗಳೂರು: ಕಂಟ್ರಿ ಪಿಸ್ತೂಲ್ ಸಿನಿಮಾ ಬಗ್ಗೆ ಈ ಮೊದಲು ಹಲವು ಸುದ್ದಿಗಳು ಕೇಳಿ ಬಂದಿದ್ದವು. ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ನಂತರ ಯಶ್ ಹೀರೋ ಎಂಬ ಮಾತು ಕೇಳಿ ಬಂದಿತ್ತು. ಈಗ ಈ ಎಲ್ಲಾ ರೂಮರ್ಸ್ ಗಳಿಗೆ ತೆರೆ ಬಿದ್ದಿದ್ದು, ಸಿನಿಮಾಗೆ ಹೊಸ ನಾಯಕನ ಆಯ್ಕೆಯಾಗಿದೆ.
ನಟ ಅಜಯ್ ಕುಮಾರ್ ಪುತ್ರ ಸೂರ್ಯನ್ ಕಂಟ್ರಿ ಪಿಸ್ತೂಲ್ ಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ. ರಮೇಶ್ ಕಶ್ಯಪ್ ನಿರ್ಮಾಣದ ಸಿನಿಮಾವನ್ನು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಲಿದ್ದಾರೆ,
ಕಳೆದ ಎರಡು ದಶಕಗಳಿಂದ ಅಜಯ್ ಕುಮಾರ್ ಕನ್ನಡ ಸಿನಿಮಾ ರಂಗದಲ್ಲಿದ್ದಾರೆ, ತವರಿಗೆ ಬಾ ತಂಗಿ,ಲಾಲಿ ಹಾಡು, ತವರಿನ ಸಿರಿ ಹಾಗೂ ಇತ್ತೀಚಿನ ಕ್ರೇಜಿ ಬಾಯ್ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.
6 ಅಡಿ 5 ಇಂಚು ಎತ್ತರವಿರುವ ಅಜಯ್ ಕುಮಾರ್ ಪುತ್ರ ಸೂರ್ಯನ್ ಕಂಟ್ರಿ ಪಿಸ್ತೂಲ್ ಗೆ ನಾಯಕನಾಗಿದ್ದು, ಆಗಸ್ಟ್ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆ. ಸದ್ಯಕ್ಕೆ ಚಂದ್ರಶೇಖರ್ ಬಂಡಿಯಪ್ಪ ತಾರಕಾಸುರ ಸಿನಿಮಾ ನಿರ್ದೇಶಿಸುತ್ತಿದ್ದು, ಕಂಟ್ರಿ ಪಿಸ್ತೂಲ್ ಗೆ ಸಂಭಾಷಣೆ ಸಿದ್ಧ ಪಡಿಸುತ್ತಿದ್ದಾರೆ.
ನಾನು ವೈಭವ್ ಜೊತೆ ಕಂಟ್ರಿ ಪಿಸ್ತೂಲ್ ಸಿನಿಮಾ ಮಾಡಬೇಕೆಂದುಕೊಂಡಿದ್ದೆ. ಆದರೇ ರಮೇಶ್ ಕಶ್ಯಪ್ ಈಗಾಗಲೇ ಆ ಟೈಟಲ್ ಅನ್ನು ನೋಂದಾಯಸಿದ್ದಾರೆಂದು ಫಿಲಂ ಚೇಂಬರ್ ನಿಂದ ತಿಳಿಯಿತು. ಆದರೆ ಕಳೆದ ಯುಗಾದಿ ಹಬ್ಬದ ಸಮಯದಲ್ಲಿ ಅಜಯ್ ಕುಮಾರ್ ನನಗೆ ಕರೆ ಮಾಡಿನಿಮಗೆ ಆಸಕ್ತಿಯಿದ್ದರೇ ನನ್ನ ಮಗ ಸಿನಿಮಾದಲ್ಲಿ ನಟಿಸಲಿದ್ದಾನೆ ಎಂದು ಕೇಳಿದರು. ನಂತರ ಇಬ್ಬರು ಮಾತುಕತೆ ನಡೆಸಿ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಮುಂದಿನ 10 ದಿನಗಳಲ್ಲಿ ಫೋಟೋ ಶೂಟ್ ನಡೆಯಲಿದೆ. ಸೂರ್ಯನ್ ಗೆ ಉತ್ತಮ ನಾಯಕನಾಗುವ ಎಲ್ಲಾ ಗುಣಲಕ್ಷಣಗಳಿವೆ, ಸಿನಿಮಾ ಇಂಡಸ್ಟ್ರಿಗೆ ಆತನನ್ನು ಪರಿಚಯಿಸಲು ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಚಂದ್ರಶೇಖರ್ ಬಂಡಿಯಪ್ಪSuryanChandrakshekar BandiyappaCountry PistolRamesh kashyapಸೂರ್ಯನ್ಕಂಟ್ರಿ ಪಿಸ್ತೂಲ್ರಮೇಶ್ ಕಶ್ಯಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


