ಸಿನಿಮಾ ಸುದ್ದಿ

ದಿನಕರ್ ತೂಗುದೀಪ 'ಲೈಫ್ ಜೊತೆ ಒಂದ್ ಸೆಲ್ಫಿ'ಗೆ ಹರಿಪ್ರಿಯಾ ಸಾಥ್

ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾದಲ್ಲಿ ನಾಯಕರಾಗಿ ಪ್ರಜ್ವಲ್ ದೇವರಾಜ್ ಮತ್ತು ಪ್ರೇಮ್ ನಟಿಸುತ್ತಿದ್ದು ಹರಿಪ್ರಿಯಾ ...

ದಿನಕರ್ ತೂಗುದೀಪ 'ಲೈಫ್ ಜೊತೆ ಒಂದ್ ಸೆಲ್ಫಿ'ಗೆ ಹರಿಪ್ರಿಯಾ ಸಾಥ್
ಹರಿಪ್ರಿಯಾ ಮತ್ತು ದಿನಕರ್ ತೂಗುದೀಪ
Published On :
ಬೆಂಗಳೂರು: ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾದಲ್ಲಿ ನಾಯಕರಾಗಿ ಪ್ರಜ್ವಲ್ ದೇವರಾಜ್ ಮತ್ತು ಪ್ರೇಮ್ ನಟಿಸುತ್ತಿದ್ದು ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ದಿನಕರ್ ಪತ್ನಿ ಮಾನಸ ಕಥೆ ಬರೆದಿದ್ದಾರೆ. ಫ್ರೆಂಡ್ ಶಿಪ್ ಕಥೆಯಾಗಿದ್ದು, ಪ್ರೇಮ್ ಜೊತೆ ಪ್ರಜ್ವಲ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ಕನ್ನಡ ನಾಯಕಿಯರಿಗೆ ಆದ್ಯತೆ ನೀಡುವ ದಿನಕರನ್ ಹರಿಪ್ರಿಯಾ ಈ ಕಥೆಗೆ ಸೂಕ್ತ ನಾಯಕಿ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಹಲವಾರು ಉತ್ತಮ ನಾಯಕಿಯರಿದ್ದಾರೆ, ಹಲವಾರು ಸುತ್ತಿನ ಚರ್ಚೆಯ ನಂತರ ಹರಿಪ್ರಿಯಾ ಅವರನ್ನು ಚಿತ್ರತಂಡ ಅವಿರೋಧವಾಗಿ ಆಯ್ಕೆ ಮಾಡಿದೆ. ಹರಿಪ್ರಿಯಾ ಕೂಡ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ ಎಂದು ದಿನಕರ್ ಹೇಳಿದ್ದಾರೆ.
ಹರಿಪ್ರಿಯ ಅವರ ಬಹುತೇಕ ಸಿನಿಮಾಗಳನ್ನು ನೋಡಿದ್ದು, ನೀರ್ ದೋಸೆ ಚಿತ್ರದಲ್ಲಿ ಆಕೆ ಅದ್ಭುತವಾಗಿ ನಟಿಸಿದ್ದಾರೆ ಎಂದು ದಿನಕರನ್ ಹೊಗಳಿದ್ದಾರೆ, ಲೈಫ್ ಜೊತೆ ಒಂದ್ ಸೆಲ್ಫೀ ಸಿನಿಮಾದಲ್ಲಿ ಆಕೆಗೆ ಯಾವುದೇ ಪ್ರಣಯ ಸನ್ನಿವೇಶಗಳಿಲ್ಲ,  ಆಕೆ ನಟಿಸಿರುವ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇದರಲ್ಲಿ ವಿಶೇಷ ಪಾತ್ರದಲ್ಲಿ ಅವರದ್ದಾಗಿದೆ ಎಂದು ಹೇಳಿದ್ದಾರೆ.
ವಿರಾಟ್ ಸಾಯಿ ಕ್ರಿಯೇಷನ್ಸ್  ಬ್ಯಾನರ್ ಅಡಿ ಸಮೃದ್ಧಿ ಮಂಜುನಾಥ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಸೆಪ್ಟಂಬರ್ ನಲ್ಲಿ  ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು,  ವಿ. ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.