ಸಿನಿಮಾ ಸುದ್ದಿ

ತಮಿಳು ಬಿಗ್ ಬಾಸ್ ಗೆ ನಿರೂಪಕರಾಗಿ ಕಮಲ್ ಹಾಸನ್ ಆಯ್ಕೆ!

ತಮಿಳು ಬಿಗ್ ಬಾಸ್ ರಿಯಾಲಿಟಿ ಶೋಗೆ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ತಮಿಳು ಬಿಗ್ ಬಾಸ್ ಗೆ ನಿರೂಪಕರಾಗಿ ಕಮಲ್ ಹಾಸನ್ ಆಯ್ಕೆ!
ಸಂಗ್ರಹ ಚಿತ್ರ
Published On :

ಚೆನ್ನೈ: ತಮಿಳು ಬಿಗ್ ಬಾಸ್ ರಿಯಾಲಿಟಿ ಶೋಗೆ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಸಲ್ಮಾನ್ ಖಾನ್, ಸುದೀಪ್, ಅಮಿತಾಬ್ ಬಚ್ಚನ್, ಚಿರಂಜೀವಿ, ನಾಗಾರ್ಜುನ, ಸಂಜಯ್ ದತ್ ಸೇರಿದಂತೆ ಹಲವು ಖ್ಯಾತ ನಟರು ಕಿರುತೆರೆ ಪ್ರವೇಶಿಸಿದ್ದು, ಇದೀಗ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು  ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅದೂ ಕೂಡ ವಿಶ್ವಾದ್ಯಂತ ಭಾರಿ ಕ್ರೇಜ್ ಹುಟ್ಟಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ. ಹೌದು.. ನಟ ಕಮಲ್ ಹಾಸನ್ ಬಿಗ್ ಬಾಸ್ ಶೋಗೆ ನಿರೂಪಕರಾಗಲು ಒಪ್ಪಿಗೆ  ಸೂಚಿಸಿದ್ದಾರಂತೆ. ಇದೇ ಮೊದಲ ಬಾರಿಗೆ ತಮಿಳಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆಯೋಜನೆಯಾಗುತ್ತಿದ್ದು, ಇದಕ್ಕೆ ನಿರೂಪಕರಾಗಲು ಕಮಲ್ ಹಾಸನ್ ಒಪ್ಪಿಗೆ ಸೂಚಿಸಿದ್ದಾರಂತೆ.

ಈ ವಿಚಾರವನ್ನು ಸ್ವತಃ ಕಮಲ್ ಹಾಸನ್ ಅವರು ಸ್ಪಷ್ಟಪಡಿಸಿದ್ದು, ತಮಿಳು ಅವತರಣಿಕೆಯ ಬಿಗ್ ಬಾಸ್ ಶೋ ನಿರೂಪಣೆಗೆ ತಾವು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಗೆ ಫುಲ್ ಮಾರ್ಕ್ಸ್ ನೀಡಿದ ಕಮಲ್!
ಇನ್ನು ಹಿಂದಿ ಅವತರಣಿಕೆಯ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ನಟ ಸಲ್ಮಾನ್ ಖಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಕಮಲ್ ಹಾಸನ್, ಹಿಂದಿ ಅವತರಣಿಕೆಯ ಬಿಗ್ ಬಾಸ್ ಶೋ ನಿಜಕ್ಕೂ ಚೆನ್ನಾಗಿ  ಮೂಡಿಬರುತ್ತಿದೆ. ಪ್ರಮುಖವಾಗಿ ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಅವರ ನಿರೂಪಣೆ ಅದ್ಭುತವಾಗಿದೆ. ಸ್ಪರ್ಧಿಗಳೊಂದಿಗೆ ಅವರು ಬೆರೆಯುವ ರೀತಿ ಹಾಗೂ ಸ್ಪರ್ಧಿಗಳ ನಡುವಿನ ಸ್ನೇಹ ಸಂಬಂಧ ಬೆಸೆಯುವ ಅವರ ಪ್ರಾಮಾಣಿಕ  ಪ್ರಯತ್ನ ಮೆಚ್ಚುವಂತಹುದ್ದು. ಕಾರ್ಯಕ್ರಮ ನಿರೂಪಣೆ ವೇಳೆ ನಟಿಸುತ್ತಿದ್ದಾರೆ ಎಂದೆನಿಸುವುದಿಲ್ಲ. ಸಲ್ಮಾನ್ ಖಾನ್ ಸಾಮಾನ್ಯವಾಗಿಯೇ ಸ್ನೇಹ ಜೀವಿಯಾಗಿದ್ದು, ಇದು ಅವರ ಶೋನಲ್ಲೂ ಕಾಣಿಸುತ್ತದೆ ಕಮಲ್ ಹಾಸನ್  ಹೇಳಿದ್ದಾರೆ.

ಇಂಗ್ಲೀಷ್, ಹಿಂದಿ, ಕನ್ನಡದ ನಂತರ ಈಗ ತಮಿಳಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಲಿದ್ದು, ಈಗಾಗಲೇ ಕಾರ್ಯಕ್ರಮಕ್ಕಾಗಿ ಭರದ ಸಿದ್ದತೆಗಳು ನಡೆದಿದೆ. ಆದರೆ, ಯಾವ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತದೆ  ಎಂಬುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ನಿರೀಕ್ಷೆಯಂತೆಯೇ ಈ ಮೊದಲ ಸೀಸನ್ ನಲ್ಲಿ ರಾಜಕಾರಣ ಮತ್ತು ಸಿನಿಮಾ ರಂಗದಲ್ಲಿ ಫೇಮಸ್ ಆಗಿರುವವರು ಬಿಗ್ ಬಾಸ್ ಪ್ರವೇಶ ಮಾಡಲಿದ್ದಾರಂತೆ.

ಸದ್ಯ, ಶಬಾಶ್ ನಾಯ್ಡು ಚಿತ್ರವನ್ನ ಮಾಡುತ್ತಿರುವ ಕಮಲ್ ಹಾಸನ್ ಗಾಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕೆಲ ತಿಂಗಳುಗಳ ಕಾಲ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ಸೂಚಿಸಿದ್ದಾರಂತೆ. ಇದರ ಜೊತೆಗೆ  ವಿಶ್ವರೂಪಂ 2 ಚಿತ್ರದ ಕೆಲಸವು ಪಗತಿಯಲ್ಲಿದೆ. ಇದೇ 2017ರ ಅಂತ್ಯದ ವೇಳೆಗೆ ವಿಶ್ವರೂಪಂ 2 ತೆರೆಗೆ ತರಲು ಕಮಲ್ ಯೋಜನೆ ರೂಪಿಸಿದ್ದು, ಈ ನಡುವೆ ಬಿಗ್ ಬಾಸ್ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಲು  ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.