ಈ ತಿಂಗಳೊಳಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಗರಿಷ್ಠ 200 ರು. ಟಿಕೆಟ್ ದರ ನಿಗದಿ ಜಾರಿ: ಸಿದ್ದರಾಮಯ್ಯ
ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಗರಿಷ್ಟ 200 ರುಪಾಯಿ ಟಿಕೆಟ್ ದರ ನಿಗದಿ ಕುರಿತಂತೆ ಈ ತಿಂಗಳೊಳಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ...

Published On :
ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಗರಿಷ್ಟ 200 ರುಪಾಯಿ ಟಿಕೆಟ್ ದರ ನಿಗದಿ ಕುರಿತಂತೆ ಈ ತಿಂಗಳೊಳಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಜೆಟ್ ನಲ್ಲಿ ಘೋಷಿಸಿರುವಂತೆ ಕನ್ನಡ ಸಿನಿಮಾಗಳಿಗೆ ಟಿಕೆಟ್ ದರ 200 ರು. ನಿಗದಿ ಆಗಬೇಕಿದೆ. ಟಿಕೆಟ್ ದರ ನಿಗದಿ ಕಾರ್ಯ ತಿಂಗಳೊಳಗೆ ಜಾರಿಯಾಗಲಿದೆ ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಹೇಳಿದ್ದಾರೆ.
ಇನ್ನು ಡಬ್ಬಿಂಗ್ ಸಿನಿಮಾ ಸಂಬಂಧ ಯಾವುದೇ ಸ್ಪಷ್ಟ ನಿಯಮ ಇನ್ನು ರೂಪಿಸಿಲ್ಲ. ಡಾ. ರಾಜ್ ಕುಮಾರ್ ಜನ್ಮದಿನದಂದು ಇದಕ್ಕೆ ಸ್ಪಷ್ಟತೇ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
kannada movieಬೆಂಗಳೂರುBengaluruSiddaramaiahಸಿದ್ದರಾಮಯ್ಯಕನ್ನಡ ಚಿತ್ರಟಿಕೆಟ್ ದರಮಲ್ಟಿಪ್ಲೆಕ್ಸ್MultiplexesTicket Price
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


