ಸಿನಿಮಾ ಸುದ್ದಿ

'ದಿಲ್ ಸೆ' ನಂತರ ಮತ್ತೆ ಲಡಾಕ್ ನಲ್ಲಿ ಮಣಿರತ್ನಂ ಚಿತ್ರೀಕರಣ

'ಕಾಟ್ರು ವೇಳಿಯಿದೈ' ಸಿನೆಮಾ ಚಿತ್ರೀಕರಣದ ಕೊನೆಯ ಹಂತದಲ್ಲಿರುವ ಪ್ರಖ್ಯಾತ ನಿರ್ದೇಶಕ ಮಣಿರತ್ನಂ, ಕೆಲವು ಪ್ರಮುಖ ದೃಶ್ಯಗಳನ್ನು ಲಡಾಕ್ ನಲ್ಲಿ ಚಿತ್ರೀಕರಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಈ ಸಿನೆಮಾದಲ್ಲಿ

'ದಿಲ್ ಸೆ' ನಂತರ ಮತ್ತೆ ಲಡಾಕ್ ನಲ್ಲಿ ಮಣಿರತ್ನಂ ಚಿತ್ರೀಕರಣ
ಪ್ರಖ್ಯಾತ ನಿರ್ದೇಶಕ ಮಣಿರತ್ನಂ
Published On :
'ಕಾಟ್ರು ವೇಳಿಯಿದೈ' ಸಿನೆಮಾ ಚಿತ್ರೀಕರಣದ ಕೊನೆಯ ಹಂತದಲ್ಲಿರುವ ಪ್ರಖ್ಯಾತ ನಿರ್ದೇಶಕ ಮಣಿರತ್ನಂ, ಕೆಲವು ಪ್ರಮುಖ ದೃಶ್ಯಗಳನ್ನು ಲಡಾಕ್ ನಲ್ಲಿ ಚಿತ್ರೀಕರಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಈ ಸಿನೆಮಾದಲ್ಲಿ ಕಾರ್ತಿ, ಅದಿತಿ ರಾವ್ ಹೈದರಿ, ರುಕ್ಮಿಣಿ ವಿಜಯ್ ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ. 
ಮೂಲಗಳ ಪ್ರಕಾರ ನಿರ್ದೇಶಕ ಮತ್ತು ಸ್ಟಂಟ್ ಮಾಸ್ಟರ್ ಶಾಮ್ ಕೌಶಲ್ ಉತ್ತರದಲ್ಲಿ ಚಿತ್ರೀಕರಣಕ್ಕಾಗಿ ಹೊರಾಂಗಣ ಪ್ರದೇಶಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರಂತೆ. ಕೌಶಲ್ ಈ ಹಿಂದೆ ಮಣಿರತ್ನಂ ಜೊತೆಗೆ 'ರಾವಣ್' ಸಿನೆಮಾದಲ್ಲಿ ಕೆಲಸ ಮಾಡಿದ್ದರು. 
ಈಗ ಎರಡು ಹಂತದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಸದ್ಯಕ್ಕೆ ವಿರಾಮದಲ್ಲಿದೆ. ಸಿನೆಮಾದ ಬಹುತೇಕ ಚಿತ್ರೀಕರಣ ಚೆನ್ನೈ ಮತ್ತು ಊಟಿಯಲ್ಲಿ ನಡೆದಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಕಾಶ್ಮೀರದಲ್ಲಿ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. 
"ಲಡಾಕ್ ಗೆ ತೆರಳುವ ಮುಂಚೆ ಕಾಶ್ಮೀರದಲ್ಲಿ ಕೆಲವು ದೃಶ್ಯಗಳು ಚಿತ್ರೀಕರಣಗೊಳ್ಳಲಿವೆ. 'ದಿಲ್ ಸೆ' ನಂತರ 20 ವರ್ಷಗಳ ನಂತರ ಲಡಾಕ್ ನಲ್ಲಿ ಮೊದಲ ಬಾರಿಗೆ ಮಣಿರತ್ನಂ ಚಿತ್ರೀಕರಣ ಮಾಡಲಿದ್ದಾರೆ" ಎನ್ನುತ್ತವೆ ಮೂಲಗಳು. 
ಎ ಆರ್ ರಹಮಾನ್ ಅವರ ಸಂಗೀತ ಸಿನೆಮಾಗಿದ್ದು, ರವಿ ವರ್ಮ ಸಿನೆಮ್ಯಾಟೋಗ್ರಾಫರ್. ಈ ಕಥೆ ಯುದ್ಧದ ಹಿನ್ನಲೆಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.