ಸಿನಿಮಾ ಸುದ್ದಿ

ಜನವರಿಯಿಂದ ಹಾಲಿವುಡ್ ಸಿನೆಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿರುವ ಧನುಷ್

ತಮ್ಮ ಚೊಚ್ಚಲ ನಿರ್ದೇಶನದ ಚಲನಚಿತ್ರ ತಮಿಳಿನ 'ಪವರ್ ಪಾಂಡಿ'ಯ ಸಿದ್ಧತೆಯಲ್ಲಿ ನಿರತರಾಗಿರುವ ನಟ ಧನುಷ್, ಜನವರಿ 2017 ರಿಂದ 'ದ ಎಕ್ಸ್ಟ್ರಾಆರ್ಡಿನರಿ ಜರ್ನಿ ಆಫ್ ಎ ಫಕೀರ್ ವೂ ಗಾಟ್ ಟ್ರ್ಯಾಪ್ಡ್ ಇನ್ ಆನ್

ಜನವರಿಯಿಂದ ಹಾಲಿವುಡ್ ಸಿನೆಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿರುವ ಧನುಷ್
ನಟ ಧನುಷ್
Published On :
ಚೆನ್ನೈ: ತಮ್ಮ ಚೊಚ್ಚಲ ನಿರ್ದೇಶನದ ಚಲನಚಿತ್ರ ತಮಿಳಿನ 'ಪವರ್ ಪಾಂಡಿ'ಯ ಸಿದ್ಧತೆಯಲ್ಲಿ ನಿರತರಾಗಿರುವ ನಟ ಧನುಷ್, ಜನವರಿ 2017 ರಿಂದ 'ದ ಎಕ್ಸ್ಟ್ರಾಆರ್ಡಿನರಿ ಜರ್ನಿ ಆಫ್ ಎ ಫಕೀರ್ ವೂ ಗಾಟ್ ಟ್ರ್ಯಾಪ್ಡ್ ಇನ್ ಆನ್ ಇಕಿಯಾ ಕಪ್ಬೋರ್ಡ್' ಹಾಲಿವುಡ್ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದು ಅವರ ಮೊದಲ ಹಾಲಿವುಡ್ ಸಿನೆಮಾ ಆಗಲಿದೆ. 
"ಈ ಯೋಜನೆ ಇನ್ನೂ ಮುಂಚಿತವಾಗಿಯೇ ಪ್ರಾರಂಭವಾಗಬೇಕಿತ್ತು, ಆದರೆ ಕೆಲವು ಕಾರಣಗಳಿಂದ ಮುಂದೆ ಹೋಯಿತು. ಧನುಷ್ ಜನವರಿಯಿಂದ ಸಿನೆಮಾ ಸೆಟ್ ಸೇರಲಿದ್ದಾರೆ. ಈ ಮಧ್ಯೆ ಅವರು 'ಪವರ್ ಪಾಂಡಿ' ಸಿನೆಮಾದ ಚಿತ್ರೀಕರಣ ಮುಗಿಸಲಿದ್ದು, ವೆಟ್ರಿಮಾರನ್ ಅವರ 'ವಡಾ ಚೆನೈ' ಸಿನೆಮಾದ ಬಹುತೇಕ ಚಿತ್ರೀಕರಣವನ್ನು ಮುಗಿಸಲಿದ್ದಾರೆ" ಎಂದು ಈ ಬಳವಣಿಗೆಯನ್ನು ತಿಳಿದ ಮೂಲಗಳು ತಿಳಿಸಿವೆ. 
ಜನಪ್ರಿಯ ಕಾದಂಬರಿಯನ್ನು ಆಧರಿಸಿ ಮಾಡುತ್ತಿರುವ ಈ ಸಿನೆಮಾವನ್ನು ಇರಾನಿ ನಿರ್ದೇಶಕ ಮಾರ್ಜಾನೆ ಸತ್ರಾಪಿ ನಿರ್ದೇಶಿಸಲಿದ್ದಾರೆ. 
ಭಾರತ ಮೂಲದ ಪ್ಯಾರಿಸ್ ನಲ್ಲಿ ನೆಲೆಸಿರುವ ಮಾಂತ್ರಿಕನ ಅಜಾ ಪಾತ್ರವನ್ನು ಧನುಷ್ ನಿರ್ವಹಿಸಲಿದ್ದು, ಭಾರತ, ಪ್ಯಾರಿಸ್, ಮೊರ್ರಾಕೊ ಮತ್ತು ಇಟಲಿಯಲ್ಲಿ ಈ ಸಿನೆಮಾ ಚಿತ್ರೀಕರಣಗೊಳ್ಳಲಿದೆ. 
ಈ ಸಿನೆಮಾದಲ್ಲಿ ಉಮಾ ಥುರ್ಮಾನ್ ಮತ್ತು ಅಲೆಕ್ಸಾಂಡ್ರಾ ದಡ್ಡಾರಿಯೋ ಕೂಡ ನಟಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.