ಮನೋರಂಜನ್ 'ಸಾಹೇಬ' ಚಿತ್ರೀಕರಣ ಬಹುತೇಕ ಮುಕ್ತಾಯ; ಡಿಸೆಂಬರ್ ನಲ್ಲಿ ಬಿಡುಗಡೆ?
'ಸಾಹೇಬ' ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಿದೆ. ಎರಡು ದಿನಗಳ ಹಿಂದೆ ನಟ ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ ಒಳಗೊಂಡ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣವನ್ನು ತಂಡ

Published On :
ಬೆಂಗಳೂರು: 'ಸಾಹೇಬ' ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಿದೆ. ಎರಡು ದಿನಗಳ ಹಿಂದೆ ನಟ ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ ಒಳಗೊಂಡ ರೋಮ್ಯಾಂಟಿಕ್ ಹಾಡಿನ ಚಿತ್ರೀಕರಣವನ್ನು ತಂಡ ಮುಗಿಸಿದೆ.
ಈ ಹಾಡಿನ ಸ್ಟಿಲ್ ಗಳನ್ನು ಗಮನಿಸಿದಾಗ, ಈ ಇಬ್ಬರೂ ನಟರ ಸ್ಕ್ರೀನ್ ಕೆಮಿಸ್ಟ್ರಿ ಬಹಳ ಆಪ್ತವಾಗಿದೆ ಎಂದಿನಿಸದೆ ಇರದು. 'ಬಾ ಬಾ ಸಾಹೇಬ' ಎಂಬ ಈ ಡ್ಯುಯೆಟ್ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
"ಈ ಹಾಡಿನಲ್ಲಿ ಮನೋರಂಜನ್ ಮತ್ತು ನಾನು ಕಾಣಿಸಿಕೊಂಡರು, ನನ್ನದೇ ಪ್ರಮುಖ ಪಾತ್ರ ಇಲ್ಲಿ. ಏಕೆಂದರೆ ಸಿನೆಮಾದಲ್ಲಿ ಅವರು ನನ್ನ ಸಾಹೇಬ ಮತ್ತು ನಾವು ಅವರ ಜೊತೆಗೆ ಇರಬಯಸುತ್ತೇನೆ, ಈ ಹಾಡಿನ ಮೂಲಕ ಪ್ರೀತಿ ಅಂಕುರಿಸುತ್ತದೆ. ಇದು ರೆಟ್ರೋ ಶೈಲಿಯ ನೃತ್ಯ" ಎಂದು ವಿವರಿಸುತ್ತಾರೆ ನಟಿ ಶಾನ್ವಿ.
ಇನ್ನೆರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು. ಆದಷ್ಟು ಬೇಗ ಅದನ್ನು ಮುಗಿಸಿ ಡಿಸೆಂಬರ್ ನಲ್ಲಿ ಸಿನೆಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಈಮಧ್ಯೆ ರಮೇಶ್ ಅರವಿಂದ್ ನಿರ್ದೇಶನದ ಗಣೇಶ್ ಮತ್ತು ಶಾನ್ವಿ ಅಭಿನಯದ 'ಸುಂದರಾಂಗ ಜಾಣ' ಬಿಡುಗಡೆಗೆ ಸಿದ್ಧವಾಗಿದೆ. ಇದರ ನಂತರ ಭರತ್ ನಿರ್ದೇಶನದ 'ಸಾಹೇಬ' ಬಿಡುಗಡೆಗೆ ಕೂಡ ಶಾನ್ವಿ ಎದುರು ನೋಡುತ್ತಿದ್ದಾರೆ. ಶ್ರೀಮುರಳಿ ಜೊತೆಗೆ 'ಮುಫ್ತಿ' ಸಿನೆಮಾದ ಎರಡನೇ ಹಂತದ ಚಿತ್ರೀಕರಣದಲ್ಲಿ ಕೂಡ ತೊಡಗಿಸಿಕೊಂಡಿದ್ದು, ರಕ್ಷಿತ್ ಶೆಟ್ಟಿ ಜೊತೆಗೆ ಕೂಡ ಒಂದು ಸಿನೆಮಾದಲ್ಲಿ ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


