'ಮಾಸ್ತಿ ಗುಡಿ'ಗೆ ದುನಿಯಾ ವಿಜಯ್ ಸೂಪರ್ ಸ್ಟಂಟ್ಸ್
ಸೂಪರ್ ಸ್ಟಂಟ್ ಗಳನ್ನು ಮಾಡುವುದಕ್ಕೆ ಹೆಸರಾಗಿರುವ ದುನಿಯಾ ವಿಜಯ್ ತಮ್ಮ ಮುಂದಿನ ಸಿನೆಮಾ 'ಮಾಸ್ತಿ ಗುಡಿ'ಯಲ್ಲಿಯೂ ಅವುಗಳನ್ನು ಹೇರಳವಾಗಿ ನಿಭಾಯಿಸಿದ್ದಾರಂತೆ.

Published On :
ಬೆಂಗಳೂರು: ಸೂಪರ್ ಸ್ಟಂಟ್ ಗಳನ್ನು ಮಾಡುವುದಕ್ಕೆ ಹೆಸರಾಗಿರುವ ದುನಿಯಾ ವಿಜಯ್ ತಮ್ಮ ಮುಂದಿನ ಸಿನೆಮಾ 'ಮಾಸ್ತಿ ಗುಡಿ'ಯಲ್ಲಿಯೂ ಅವುಗಳನ್ನು ಹೇರಳವಾಗಿ ನಿಭಾಯಿಸಿದ್ದಾರಂತೆ.
ಸಿನೆಮಾದ ಕೊನೆಯ ಹಂತದ ಚಿತ್ರೀಕರಣ ಮಾಡಿಮುಗಿಸಲು ಚಿತ್ರತಂಡ ಸನ್ನದ್ಧವಾಗಿದ್ದು, ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ಕೈಮಾಕ್ಸ್ ಚಿತ್ರೀಕರಣ ಜಾರಿಯಲ್ಲಿದೆ. ನಿರ್ಮಾಪಕ ಸುಂದರ್ ಪಿ ಗೌಡ್ರು ಹೇಳುವಂತೆ ಈ ನಿರ್ಧಿಷ್ಟ ಸ್ಟಂಟ್ ಗಾಗಿಯೇ 1.25 ವೆಚ್ಚ ತಗುಲಿದೆಯಂತೆ.
"ಈ ಸಿನೆಮಾದಲ್ಲಿ ಆರು ಪ್ರಮುಖ ಫೈಟ್ ಗಳಿವೆ ಮತ್ತು ಕ್ಲೈಮಾಕ್ಸ್ ನಲ್ಲಿ ವಿಜಯ್ ಅವರ ಸ್ಟಂಟ್ ಗಳಿವೆ. ರವಿ ವರ್ಮ ಸಾಹಸ ನಿರ್ದೇಶನ ಮಾಡಿದ್ದು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತವೆ" ಎನ್ನುತ್ತಾರೆ ನಿರ್ಮಾಪಕ.
ಕ್ಲೈಮ್ಯಾಕ್ಸ್ ಗೆ 11 ದಿನಗಳ ಚಿತ್ರೀಕರಣ ಮಾಡಬೇಕಿದ್ದು, ಹೆಲಿಕ್ಯಾಪ್ಟರ್ ಮತ್ತು ದೋಣಿಗಳು ಇದರ ಪ್ರಮುಖ ಅಂಶಗಳಂತೆ. "ಹಡುಗುಗಳನ್ನು ತಂದು ನಿಲ್ಲಿಸಲಾಗಿದೆ. ಹೆಲಿಕ್ಯಾಪ್ಟರ್ ಬಳಸಲು ಅನುಮತಿ ಕೋರಿದ್ದೇವೆ ಇನ್ನೆರಡು ದಿನಗಳಲ್ಲಿ ಅದು ಸಿಗಲಿದೆ" ಎನ್ನುವ ಸುಂದರ್ "ಈಗ ಸದ್ಯಕ್ಕೆ ಚಿತ್ರೀಕರಣಗೊಳುತ್ತಿರುವ ದೃಶ್ಯ ಹೀರೊ ಮತ್ತು ಇಬ್ಬರು ವಿಲನ್ ಗಳ ನಡುವೆ ಕಾದಾಟ. ವಿಲನ್ ಗಳು ಅನಿಲ್ ರಾಘವ್ ಮಾತು ಉದಯ್" ಎನ್ನುತ್ತಾರೆ.
ಈ ಕ್ಲೈಮ್ಯಾಕ್ಸ್ ಚಿತ್ರೀಕರಣದೊಂದಿಗೆ ಡಬ್ಬಿಂಗ್ ಕೆಲಸಗಳು ಪ್ರಾರಂಭವಾಗಲಿವೆ ಎನ್ನುವ ನಿಮ್ರಾಪಿಕ "ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಇರಾದೆ ಇದೆ" ಎನ್ನುತ್ತಾರೆ ಸುಂದರ್.
ವಿಜಯ್ ಅಲ್ಲದೆ ಅಮೂಲ್ಯ ಮತ್ತು ಕೃತಿ ಕರಬಂಧ ಮುಖ್ಯಪಾತ್ರಗಳಲ್ಲಿದ್ದು, ರಂಗಾಯಣ ರಘು, ಸುಹಾಸಿನಿ ಮಣಿರತ್ನಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹೆಗಡೆ ಸಿನೆಮ್ಯಾಟೋಗ್ರಾಫರ್ ಮತ್ತು ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


