ಸಿನಿಮಾ ಸುದ್ದಿ

ನಾಗರಹಾವು ತಮಿಳು ಅವತರಣಿಕೆಗೆ ವಿರೋಧ, ಮಂಡ್ಯ ಮಾಜಿ ಸಂಸದೆ ನಟಿ ರಮ್ಯಾ ಟಾರ್ಗೆಟ್!

ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಹಾಗೂ ನಟಿ ರಮ್ಯಾ ಅಭಿನಯದ ಬಹು ನಿರೀಕ್ಷಿತ ಚಿತ್ರ ನಾಗರಹಾವು ತಮಿಳು ಅವರತರಿಣಿಕೆ ಶಿವನಾಗಂ ಗೆ ಆರಂಭಿಕ ವಿಘ್ನ ಎದುರಾಗಿದ್ದು, ಚಿತ್ರ ಬಿಡುಗಡೆ ಮಾಡದಂತೆ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ನಾಗರಹಾವು ತಮಿಳು ಅವತರಣಿಕೆಗೆ ವಿರೋಧ, ಮಂಡ್ಯ ಮಾಜಿ ಸಂಸದೆ ನಟಿ ರಮ್ಯಾ ಟಾರ್ಗೆಟ್!
ನಾಗರಹಾವು ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)
Published On :

ಚೆನ್ನೈ: ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಹಾಗೂ ನಟಿ ರಮ್ಯಾ ಅಭಿನಯದ ಬಹು ನಿರೀಕ್ಷಿತ ಚಿತ್ರ ನಾಗರಹಾವು ತಮಿಳು ಅವರತರಿಣಿಕೆ ಶಿವನಾಗಂ ಗೆ ಆರಂಭಿಕ ವಿಘ್ನ  ಎದುರಾಗಿದ್ದು, ಚಿತ್ರ ಬಿಡುಗಡೆ ಮಾಡದಂತೆ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ತಮಿಳುನಾಡಿನ ಕೆಲ ಸಂಘಟನೆಗಳು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದು, ಪ್ರಮುಖವಾಗಿ ನಟಿ ರಮ್ಯಾ ಅವರನ್ನು ಗುರಿಯಾಗಿಸಿಕೊಂಡು ಆಕ್ರೋಶ  ವ್ಯಕ್ತಪಡಿಸಿದ್ದಾರೆ. ಶಿವನಾಗಂ ಚಿತ್ರದಲ್ಲಿ ಅಭಿನಯಿಸಿರುವ ನಟಿ ರಮ್ಯಾ ಮಂಡ್ಯ ಜಿಲ್ಲೆಯ ಮಾಜಿ ಸಂಸದರಾಗಿದ್ದು, ಕಾವೇರಿ ವಿಚಾರವಾಗಿ ತಮಿಳರ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ ಅವರ  ಚಿತ್ರ ಯಾವುದೇ ಕಾರಣಕ್ಕೂ ತಮಿಳುನಾಡಿನಲ್ಲಿ ಬಿಡುಗಡೆಯಾಗಬಾರದು ಎಂದು ಪೋಸ್ಟರ್ ನಲ್ಲಿ ಬರೆದಿದ್ದಾರೆ.

ಇನ್ನು ಸಾಹಸಸಿಂಹ ವಿಷ್ಣು ವರ್ಧನ್ ಅವರ 201ನೇ ಚಿತ್ರ ಎಂದೇ ಬಿಂಬಿಸಲಾಗುತ್ತಿರುವ ಬಹುಕೋಟಿ ವೆಚ್ಚದ ನಾಗರಹಾವು ಚಿತ್ರ ಇದೇ ಅಕ್ಟೋಬರ್ 14 ಶುಕ್ರವಾರದಂದು ದೇಶಾದ್ಯಂತ  ಬಿಡುಗಡೆಯಾಗುತ್ತಿದ್ದು, ತಮಿಳಿನಲ್ಲಿ ಶಿವನಾಗಂ ಹೆಸರಿನಲ್ಲಿ ಚಿತ್ರ ಡಬ್ ಆಗಿ ತೆರೆ ಕಾಣುತ್ತಿದೆ. ಇದೀಗ ತಮಿಳರ ವಿರೋಧದಿಂದಾಗಿ ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ  ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.