'ವೀರ ಆಂಜನೇಯ ಪ್ರಸಾದ'ಕ್ಕಾಗಿ ಮತ್ತೆ ಜೊತೆಯಾದ ಪುನೀತ್-ಪವನ್
'ರಣ ವಿಕ್ರಮ'ನ ನಂತರ ನಿರ್ದೇಶಕ ಪವನ್ ಒಡೆಯರ್ ನಟ ಪುನೀತ್ ರಾಜಕುಮಾರ್ ಅವರ ಮತ್ತೊಂದು ಸಿನೆಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದವು.

Published On :
ಬೆಂಗಳೂರು: 'ರಣ ವಿಕ್ರಮ'ನ ನಂತರ ನಿರ್ದೇಶಕ ಪವನ್ ಒಡೆಯರ್ ನಟ ಪುನೀತ್ ರಾಜಕುಮಾರ್ ಅವರ ಮತ್ತೊಂದು ಸಿನೆಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದವು. ಈಗ ಆ ಸುದ್ದಿ ಸಾಕಾರವಾಗುತ್ತಿರುವ ಸುಳಿವು ಸಿಕ್ಕಿದೆ.
ಪುನೀತ್ ಅವರ ಈ ಹೊಸ ಚಿತ್ರದ ಶೀರ್ಷಿಕೆ 'ವೀರ ಆಂಜನೇಯ ಪ್ರಸಾದ' (ವಿಎಪಿ). ಇದು ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ ಎನ್ನುತ್ತವೆ ಮೂಲಗಳು. ಈ ಶೀರ್ಷಿಕೆಗೆ ನಟನ ಅಭಿಮಾನಿಗಳು ಹರ್ಷಗೊಂಡಿದ್ದಾರಂತೆ!
ಈ ಸಿನೆಮಾದ ಬಗ್ಗೆ ಇನ್ನು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಶಿರಿಷಾ ಲಗದಪತಿ ನಿರ್ಮಿಸುತ್ತಿರುವ ಈ ಸಿನೆಮಾದ ಮುಹೂರ್ತ ಅಕ್ಟೋಬರ್ 11 ಕ್ಕೆ ನೆರವೇರಲಿದೆಯಂತೆ. ಮತ್ತು ಸಿನೆಮಾದ ಚಿತ್ರೀಕರಣ ಮುಂದಿನ ವರ್ಷದ ಪ್ರಾರಂಭದಲ್ಲಿ ಶುರುವಾಗುವ ಸಾಧ್ಯತೆಯಿದೆ.
ಶಿರಿಷಾ ಲಗದಪತಿ ಈ ಹಿಂದೆ ಪವನ್ ಅವರ ತೆಲುಗು ಚಿತ್ರ 'ಪೋಟುಗದು' ಮತ್ತು ಅವರ ಚೊಚ್ಚಲ ಕನ್ನಡ ಚಿತ್ರ 'ಗೋವಿಂದಾಯನಮಃ' ನಿರ್ಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪುನೀತ್ ರಾಜಕುಮಾರ್Rana Vikramaರಣ ವಿಕ್ರಮಪವನ್ ಒಡೆಯರ್Pavan WadeyarVeera Anjaneya Prasadaವೀರ ಆಂಜನೇಯ ಪ್ರಸಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


