ಸಿನಿಮಾ ಸುದ್ದಿ

ಮುಂದಿನ ವರ್ಷ ಸಮಂತಾ ಜೊತೆ ವಿವಾಹ: ನಾಗ ಚೈತನ್ಯ

ಹಲವು ದಿನಗಳಿಂದ ನಟಿ ಸಮಂತಾ ಜೊತೆ ಪ್ರೀತಿಯ ಬಗ್ಗೆ ಎದ್ದಿದ್ದ ಎಲ್ಲಾ ಗಾಸಿಪ್ ಗಳಿಗೂ ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟಿದ್ದಾರೆ...

ಮುಂದಿನ ವರ್ಷ ಸಮಂತಾ ಜೊತೆ ವಿವಾಹ: ನಾಗ ಚೈತನ್ಯ
ಸಮಂತ್ ಮತ್ತು ನಾಗ ಚೈತನ್ಯ
Published On :

ಹೈದರಾಬಾದ್: ಹಲವು ದಿನಗಳಿಂದ ನಟಿ ಸಮಂತಾ ಜೊತೆ ಪ್ರೀತಿಯ ಬಗ್ಗೆ ಎದ್ದಿದ್ದ ಎಲ್ಲಾ ಗಾಸಿಪ್ ಗಳಿಗೂ ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಮುಂದಿನ ವರ್ಷ ನಟಿ ಸಮಂತಾ ಜೊತೆ ವಿವಾಹವಾಗುವುದಾಗಿ ಅವರು ಬಹಿರಂಗ ಪಡಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿರುವ ನಾಗ ಚೈತನ್ಯ, ನಾನು ತೀರಾ ಖಾಸಗಿ ವ್ಯಕ್ತಿ, ನನ್ನ ಪ್ರೀತಿ ವಿಷಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬೇಕೆಂದು ನನಗೆ ಯಾವತ್ತೂ ಅನ್ನಿಸಿಲ್ಲ.  ನಮ್ಮಿಬ್ಬರ ಪ್ರೀತಿ ವಿಷಯ ನನ್ನ ಸ್ನೇಹಿತರಿಗೆ ಹಲವು ದಿನಗಳಿಂದ ತಿಳಿದಿತ್ತು. ಈ ವಿಷಯವನ್ನು ನಾವಿಬ್ಬರು ನಮ್ಮ ಪೋಷಕರ ಬಳಿ ತಿಳಿಸಿದೆವು, ಅವರ ಒಪ್ಪಿಗೆ ಸಿಕ್ಕಿದ್ದು ಮುಂದಿನ ವರ್ಷ ಸಪ್ತಪದಿ ತುಳಿಯುವುದಾಗಿ ಅವರು ಹೇಳಿದ್ದಾರೆ.

ನಮ್ಮ ತಂದೆಯ ಹತ್ತಿರ ನಾನು ಈ ವಿಷಯ ತಿಳಿಸಿದಾಗ, ಮೊದಲು ನನ್ನ ಮುಖ ನೋಡಿದ ಅವರು, ನನಗೆ ಈ ಬಗ್ಗೆ ಬಹಳ ಹಿಂದೆಯೇ ತಿಳಿದಿತ್ತು, ಎಂದರು, ನನ್ನ ಪೋಷಕರು ನನ್ನ ಎಲ್ಲಾ ಇಷ್ಟಗಳಿಗೂ ಬೆಂಬಲ ನೀಡುತ್ತಾರೆ ಎಂದು ನಾಗ ಚೈತನ್ಯ ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.