ಸಿನಿಮಾ ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಅವಕಾಶ ಪಡೆದ ರವಿ ಕಿಶನ್; ಪುನೀತ್ ಎದುರು ನಟನೆ

ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.

ಸ್ಯಾಂಡಲ್ವುಡ್ ನಲ್ಲಿ  ಮತ್ತೊಂದು ಅವಕಾಶ ಪಡೆದ ರವಿ ಕಿಶನ್; ಪುನೀತ್ ಎದುರು ನಟನೆ
ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್
Published On :
ಬೆಂಗಳೂರು: ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.
ಸುದೀಪ್ ಅವರ 'ಹೆಬ್ಬುಲಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಈಗ ಮತ್ತೊಂದು ದೊಡ್ಡ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಎ ಹರ್ಷ ನಿರ್ದೇಶನದ ತಮಿಳು ಸಿನೆಮಾ 'ಪೂಜೈ' ರಿಮೇಕ್ ನಲ್ಲಿ ಪುನೀತ್ ರಾಜಕುಮಾರ್ ಎದುರು ರವಿ ಖಳನಾಯಕನ ಪಾತ್ರ ಪಡೆದಿದ್ದಾರೆ. 
ಈ ಚಿತ್ರದ ಆಯ್ಕೆಯಾಗಿರುವ ಮೊದಲ ನಟರುಗಳಲ್ಲಿ ಇವರು ಒಬ್ಬರು. ಎಂ ಎನ್ ಕುಮಾರ್ ಮತ್ತು ಜಯಶ್ರೀ ದೇವಿ ನಿರ್ಮಾಣದ ಈ ಸಿನೆಮಾಗೆ, ಮೂಲದಲ್ಲಿ ಸತ್ಯರಾಜ್ ನಟಿಸಿದ್ದ ಪಾತ್ರವನ್ನು ತುಂಬುವ ಹಿರಿಯ ನಟ ಹಾಗು ಹೀರೋಯಿನ್ ಹುಡುಕಾಟದಲ್ಲಿದೆ ಚಿತ್ರತಂಡ. 
ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡುತ್ತಿದ್ದು, ಸ್ವಾಮಿ ಜೆ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.