ಸಿನಿಮಾ ಸುದ್ದಿ

ಅನಿಲ್, ಉದಯ್ ದುನಿಯಾ ವಿಜಯ್ ಗೆ ಲೆಫ್ಟ್-ರೈಟ್ ಹ್ಯಾಂಡ್ ನಂತಿದ್ದರು

ಮಾಸ್ತಿ ಗುಡಿ ಸಿನಿಮಾ ಶೂಟಿಂಗ್ ವೇಳೆ ಖಳನಟರಾಜ ಅನಿಲ್ ಕುಮಾರ್ ಮತ್ತು ವಿಜಯ್ ರಾಘವ್ ಅವರ ದುರಂತ್ಯ ಅಂತ್ಯಕ್ಕೆ ಇಡೀ ಚಿತ್ರರಂಗವೇ ..

ಅನಿಲ್, ಉದಯ್ ದುನಿಯಾ ವಿಜಯ್ ಗೆ ಲೆಫ್ಟ್-ರೈಟ್ ಹ್ಯಾಂಡ್ ನಂತಿದ್ದರು
ಅನಿಲ್ ಮತ್ತು ಉದಯ್
Published On :

ಬೆಂಗಳೂರು: ಮಾಸ್ತಿ ಗುಡಿ ಸಿನಿಮಾ ಶೂಟಿಂಗ್ ವೇಳೆ ಖಳನಟರಾಜ ಅನಿಲ್ ಕುಮಾರ್ ಮತ್ತು ಉದಯ್ ರಾಘವ್ ಅವರ ದುರಂತ್ಯ ಅಂತ್ಯಕ್ಕೆ ಇಡೀ ಚಿತ್ರರಂಗವೇ ಆಘಾತಕ್ಕೊಳಗಾಗಿದೆ.

ಭರ್ಜರಿ ಚಿತ್ರದ ನಿರ್ದೇಶಕ ಚೇತನ್ ತಮ್ಮ ಚಿತ್ರದ ಶೂಟಿಂಗ್ ವೇಳೆ ಈ ಇಬ್ಬರು ನಟರ ಜೊತೆ ಕಳೆದ ನೆನೆಪುಗಳನ್ನು ಇಲ್ಲಿ ಸ್ಮರಿಸಿದ್ದಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ನಾನು ಅನಿಲ್ ಜೊತೆ ಉದಯ್ ಸ್ನೇಹದ ಬಗ್ಗೆ ಮಾತನಾಡಿದ್ದೆ, ನಾವಿಬ್ಬರು ಚಿತ್ರರಂಗಕ್ಕೆ ಬರುವ ಮುನ್ನವೇ ಉತ್ತಮ ಸ್ನೇಹಿತರಾಗಿದ್ದೆವು, ಈಗಲು ಒಳ್ಳೆಯ ಸ್ನೇಹಿತರಾಗಿದ್ದೇವೆ, ಮುಂದೆಯು ನಾವಿಬ್ಬರು ಜೀವದ ಗೆಳೆಯರಾಗಿರುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ಅವರಿಬ್ಬರು ಒಟ್ಟಿಗೆ ಸಾವನ್ನಪ್ಪಿರುವುದು ಅವರಿಬ್ಬರು ಜೀವದ ಗೆಳೆಯರಾಗಿದ್ದರು ಎಂಬದನ್ನು ತೋರಿಸುತ್ತದೆ ಎಂದು ಗದ್ಗದಿತರಾದರು,

ಅವರಿಬ್ಬರು ಒಳ್ಳೆಯವರು, ನಾವೆಲ್ಲರೂ ಒಟ್ಟಿಗೆ ಸೇರಿ ದೀಪಾವಳಿ ಆಚರಿಸಿದೆವು, ಆ ಕ್ಷಣಗಳು ಇಂದಿಗೂ ನನ್ನ ಮನಸಲ್ಲಿ ಹಾಗೆಯೇ ಉಳಿದಿದೆ.

ದುನಿಯಾ ವಿಜಯ್ ಸಹಾಯದಿಂದ ಇಬ್ಬರು  ಚಿತ್ರರಂಗ ಪ್ರವೇಶಿಸಿದರು. ಈ ಇಬ್ಬರು ದುನಿಯಾ ವಿಜಯ್ ಅವರ ಲೆಫ್ಟ್ ಅಂಡ್ ರೈಟ್ ಹ್ಯಾಂಡ್ ಆಗಿದ್ದರು, ಇಬ್ಬರಿಗೂ ಕನ್ನಡ ಸಿನಿಮಾ ರಂಗದಲ್ಲಿ ಉತ್ತಮ ಖಳನಟರಾಗುವ ಸಾಮರ್ಥ್ಯ ಹೊಂದಿದ್ದರು. ಅವರ ತೆರೆ ಮೇಲಿನ ಪ್ರದರ್ಶನ ಹಿಂದಿನ ಚಿತ್ರರಂಗದ ಖಳನಟರ ನಟೆನೆಯನ್ನು ನೆನಪಿಗೆ ತರುವಂತಿತ್ತು ಎಂದು ನಿರ್ದೇಶಕ ಚೇತನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಇಬ್ಬರು ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಯಾವಾಗಲೂ ಫೋನ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದ ಅವರಿಬ್ಬರದ್ದು ಮಗುವನಿಂತ ಮನಸು ಎಂದು ಹೇಳಿದ್ದಾರೆ.

ಚಿತ್ರರಂಗಕ್ಕೆ ಬರುವ ಮುನ್ನ  ಆಟೋ ಚಾಲಕರಾಗಿದ್ದ ಉದಯ್ ರಾಘವೇಂದ್ರ ಸ್ವಾಮಿ ಭಕ್ತರಾಗಿದ್ದರು ಎಂದು ಚೇತನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.