ಶೀಘ್ರದಲ್ಲೇ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ, ಖಚಿತಪಡಿಸಿದ ಅಖಿಲ್ ಅಕ್ಕಿನೇನಿ
ಟಾಲಿವುಡ್ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿದ್ದು, ಜುಲೈ ಅಂತ್ಯ ಅಥವಾ ಅಗಸ್ಟ್...

Published On :
ಹೈದರಾಬಾದ್: ಟಾಲಿವುಡ್ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿದ್ದು, ಜುಲೈ ಅಂತ್ಯ ಅಥವಾ ಅಗಸ್ಟ್ ಮೊದಲವಾರದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ತಿಳಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ನಾಗಚೈತನ್ಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಾಗಾರ್ಜುನ ಕಿರಿಯ ಪುತ್ರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸಹೋದರ ನಾಗಚೈತನ್ಯ ಹಾಗೂ ಸಮಂತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಮದುವೆ ಆಗಲು ನಿರ್ಧರಿಸಿದ್ದಾರೆ. ಇದಕ್ಕೆ ಎರಡು ಕುಟುಂಬಗಳು ಸಹಮತಿ ಸಹ ಸೂಚಿಸಿವೆ, ಮುಂದಿನ ವರ್ಷ ವಿವಾಹ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನಾಗ ಚೈತನ್ಯ ಮನಂ ಸಿನಿಮಾದಲ್ಲಿ ಸಮಂತಾ ಜತೆಗೆ ನಟಿಸಿದ್ದರು. ಇದರ ಜತೆಗೆ ಸಮಂತಾ ಜತೆಗೆ ಪ್ರೀತಿಯಲ್ಲಿ ಬಿದ್ದಿದ್ದರು. ಸದ್ಯ ಲಿವೀಂಗ್ ಟುಗೆದರ್‌ನಲ್ಲಿರುವ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ
ಈ ಮಧ್ಯೆ ಅಖಿಲ್ ಅಕ್ಕಿನೇನಿ ಹೈದರಾಬಾದ್ ಮೂಲದ ವಿನ್ಯಾಸಗಾರ್ತಿ ಶ್ರೀಯಾ ಸೋಮ್ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅಕ್ಕಿನೇನಿ ಇದನ್ನು ತಳ್ಳಿ ಹಾಕಿದ್ದು, ಶ್ರೀಯಾ ತಮ್ಮ ಕುಟುಂಬದ ಸ್ನೇಹಿತೆಯಾಗಿದ್ದಾಳೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


