ಸ್ವಚ್ಚ ಬೆಂಗಳೂರು ಅಭಿಯಾನಕ್ಕೆ ಕೈ ಜೋಡಿಸಿದ ರಾಜ್ ಕುಮಾರ್ ಕುಟುಂಬ
ಯೂಟರ್ನ್ ಚಿತ್ರ ತಂಡ ಮೇಲ್ಸೇತುವೆ ರಸ್ತೆ ರಿಪೇರಿ ಮಾಡಿದ ಬೆನ್ನಲ್ಲೇ ರನ್ ಆಂಟನಿ ತಂಡ ಬೆಂಗಳೂರಿನ ರಸ್ತೆಗಳ ಕಸ ವನ್ನು ಸ್ವಚ್ಚಗೊಳಿಸಲು ಮುಂದಾಗಿವೆ....

ಬೆಂಗಳೂರು: ಯೂಟರ್ನ್ ಚಿತ್ರ ತಂಡ ಮೇಲ್ಸೇತುವೆ ರಸ್ತೆ ರಿಪೇರಿ ಮಾಡಿದ ಬೆನ್ನಲ್ಲೇ ರನ್ ಆಂಟನಿ ತಂಡ ಬೆಂಗಳೂರಿನ ರಸ್ತೆಗಳ ಕಸ ವನ್ನು ಸ್ವಚ್ಚಗೊಳಿಸಲು ಮುಂದಾಗಿವೆ.
ಎನ್ ಜಿ ಒ ಸಂಸ್ಥೆ ಜೊತೆಗೂಡಿ, ರನ್ ಆಂಟನಿ ನಟ ಹಾಗೂ ಡಾ. ರಾಜ್ ಕುಮಾರ್ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಬೀ ಕ್ಲೀನ್ ಕೋ ಗ್ರೀನ್ ಎಂಬ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಏಪ್ರಿಲ್ 24 ರಂದು ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ರಾಘವೇಂದ್ರ ರಾಜ್ ಕುಮಾರ್ ಮತ್ತೊಬ್ಬ ಪುತ್ರ ಗುರು ರಾಜ್ ಕುಮಾರ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ರಾಘವೇಂದ್ರ ರಾಜ್ ಕುಮಾರ್ ಮಂಗಳ ರಾಘವೇಂದ್ರ, ವಿನಯ್ ರಾಜ್ ಕುಮಾರ್, ನಂದಿನಿ ಲೇಔಟ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರತಿ ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತೇವೆ ಎಂದು ನಟ ವಿನಯ್ ರಾಜ್ ಕುಮಾರ್ ತಿಳಿಸಿದ್ದಾರೆ. ಜೊತೆಗೆ ರಸ್ತೆಗಳನ್ನು ಸ್ವಚ್ಛಗೊಳಿಸಿ, ಗೋಡೆಗಳ ಮೇಲೆ ಪೈಂಟ್ ಮಾಡಿಸಿ ಗಿಡಗಳನ್ನು ನೆಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಮತ್ತು ಬಸವೇಶ್ವರ ನಗರಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಕೈಗೊಂಡಿರುವ ರನ್ ಆಂಟನಿ ತಂಡ, ಚಿತ್ರ ಬಿಡುಗಡೆಯಾದ ನಂತರ ಸ್ವಚ್ಚತೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


