ಸಿನಿಮಾ ಸುದ್ದಿ

ಬೆಂಗಳೂರಿನ ಸ್ಟಾರ್ ಹೊಟೇಲ್‌ನಲ್ಲಿ ಕಬಾಲಿ ಬಿಡುಗಡೆಗೆ ಸರ್ಕಾರ ಅನುಮತಿ ನಿರಾಕರಣೆ

ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ಅಭಿನಯದ ಕಬಾಲಿ ಚಿತ್ರ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಬೆಂಗಳೂರಿನ ಸ್ಟಾರ್ ಹೊಟೇಲ್ ನಲ್ಲಿ...

ಬೆಂಗಳೂರಿನ ಸ್ಟಾರ್ ಹೊಟೇಲ್‌ನಲ್ಲಿ ಕಬಾಲಿ ಬಿಡುಗಡೆಗೆ ಸರ್ಕಾರ ಅನುಮತಿ ನಿರಾಕರಣೆ
ರಜಿನಿಕಾಂತ್
Published On :

ಬೆಂಗಳೂರು: ಕಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ಅಭಿನಯದ ಕಬಾಲಿ ಚಿತ್ರ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಬೆಂಗಳೂರಿನ ಸ್ಟಾರ್ ಹೊಟೇಲ್ ನಲ್ಲಿ ಕಬಾಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡಲಾಗಿತ್ತು. ಇದೀಗ ರಾಜ್ಯ ಸರ್ಕಾರ ಅನುಮತಿಯನ್ನು ನಿರಾಕರಿಸಿದೆ.

ಲಹರಿ ಮ್ಯೂಜಿಕ್ ನ ವ್ಯವಸ್ಥಾಪಕ ವೇಲು ಅವರು 1964ರ ಕರ್ನಾಟಕ ಸಿನಿಮಾ ಕಾನೂನು(ರೆಗ್ಯುಲೇಶನ್) ಆಕ್ಟ್ ಮೂಲಕ ಪ್ರತಿಷ್ಠಿತ ಹೊಟೇಲ್ ನಲ್ಲಿ ಸಿನಿಮಾ ಬಿಡುಗಡೆಗೆ ಅನುಮತಿ ಪಡೆದಿದ್ದರು. ಇದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ಸಿಸಿ) ಮತ್ತು ರಾಜ್ಯ ಚಲನಚಿತ್ರ ಪ್ರದರ್ಶಕರ ಅಸೋಸಿಯೇಷನ್ ನಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದೆ.

ಪ್ರತಿಷ್ಠಿತ ಹೊಟೇಲ್ ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಅಕ್ರಮ. ಅಲ್ಲದೆ ಇದು ಬಾಕ್ಸ್ ಆಫೀಸ್ ಕಲೆಕ್ಷನ್ ಗೂ ಹಿನ್ನಡೆಯಾಗುತ್ತದೆ ಎಂಬ ವಿರೋಧಗಳು ಕೇಳಿಬಂದಿತ್ತು.

ಇನ್ನು ಸ್ಟಾರ್ ಹೊಟೇಲ್ ನಲ್ಲಿ ಚಿತ್ರ ವೀಕ್ಷಣೆಗಾಗಿ ಸುಮಾರು 3 ಸಾವಿರ ಮಂದಿ ಬುಕ್ ಮೈ ಶೋ ಮೂಲಕ ಟಿಕೇಟ್ ಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಸಿನಿಮಾ ವೀಕ್ಷಣೆಗೆ ಅನುಮತಿ ನಿರಾಕರಣೆ ಮಾಡಿರುವುದರಿಂದ ಟಿಕೆಟ್ ಬುಕ್ ಮಾಡಿರುವವರಿಗೆ ಹಣ ಹಿಂದಿರುಗಿಸಲಿದೆ.

ಈ ಬಗ್ಗೆ ಮಾತನಾಡಿರುವ ಲಹರಿ ಮ್ಯಾಜಿಕ್ ನ ಮುಖ್ಯಸ್ಥ ವೇಲು ಅವರು, ಇದು ಒಂದು ಹೊಸ ವ್ಯವಹಾರ ಮಾದರಿಯಾಗಿತ್ತು. ಇದೀಗ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ. ಸಿನಿಮಾ ಬಿಡುಗಡೆಗಾಗಿ ನಾವು ಪ್ರತಿಷ್ಠಿತ ಹೊಟೇಲ್ ವೊಂದನ್ನು ಬುಕ್ ಮಾಡಿದ್ದೇವು. ಇದೀಗ ಸಿನಿಮಾ ಪ್ರಸಾರಕ್ಕೆ ಅನುಮತಿ ನಿರಾಕರಣೆಯಾಗಿರುವುದರಿಂದ ಸಂಸ್ಧೆಗೆ 25 ಲಕ್ಷ ನಷ್ಟವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.