ಶಿವಣ್ಣನಿಗೆ ಉಡುಗೊರೆಯಾಗಿ ಎರಡು ಟಗರು ನೀಡಿದ ಅಭಿಮಾನಿಗಳು
ಜುಲೈ 12 ರಂದು ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಹುಬ್ಬಳ್ಳಿ ಮತ್ತು ಹೊಸಕೋಟೆಯಿಂದ ಬಂದಿದ್ದ ಅಭಿಮಾನಿಗಳು ಎರಡು ಟಗರುಗಳನ್ನು ಉಡುಗೊರೆಯಾಗಿ ..

ಬೆಂಗಳೂರು: ನಿರ್ದೇಶಕ ಸೂರಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಟಗರು ಎಂಬ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ.
ಜುಲೈ 12 ರಂದು ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಹುಬ್ಬಳ್ಳಿ ಮತ್ತು ಹೊಸಕೋಟೆಯಿಂದ ಬಂದಿದ್ದ ಅಭಿಮಾನಿಗಳು ಎರಡು ಟಗರುಗಳನ್ನು ಉಡುಗೊರೆಯಾಗಿ ನೀಡಿದ್ದರು.
ಅಭಿಮಾನಿಗಳು ನೀಡಿದ್ದ ಉಡುಗೊರೆ ಶಿವಣ್ಣಗೆ ಆಶ್ಚರ್ಯ ತಂದಿತ್ತು. ಇದು ಅವರ ಪ್ರೀತಿ ಅಭಿಮಾನ, ಅಭಿಮಾನಿಗಳ ಪ್ರೀತಿಗೆ ನಾನು ಬೇಡ ಎನ್ನಲು ಆಗದು, ಇದು ಚಿತ್ರದ ಸಂಕೇತ ಎಂದು ಶಿವಣ್ಣ ತಿಳಿಸಿದರು.
ಈ ಎರಡು ಟಗರುಗಳನ್ನು ಶಿವಣ್ಣ ಪತ್ನಿ, ಗವಿಪುರಂ ನಲ್ಲಿರುವ ಬಂಡಿಮಹಾಕಾಳಮ್ಮ ದೇವಾಲಯಕ್ಕೆ ನೀಡಿದ್ದಾರೆ. ಅಲ್ಲಿ ಇತರ ಪ್ರಾಣಿಗಳ ಜೊತೆ ಅವುಗಳನ್ನು ಸಾಕಲು ನೀಡಿದ್ದಾರೆ. ಆ ಎರಡು ಟಗರುಗಳಿಗೆ ತಗಲುವ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ಶಿವಣ್ಣ ಹೇಳಿದ್ದಾರೆ.
ಟಗರು ಸಿನಿಮಾದಲ್ಲಿ ಆ ಎರಡು ಟಗರುಗಳನ್ನು ಸಿನಿಮಾ ಚಿತ್ರೀಕರಣದಲ್ಲಿ ಬಳಸಿಕೊಳ್ಳುವಂತೆ ಅಭಿಮಾನಿಗಳು ಮನವಿ ಮಾಡಿದ್ದರು. ಆದರೆ ಶೂಟಿಂಗ್ ನಲ್ಲಿ ಪ್ರಾಣಿ ಬಳಕೆಗೆ ಹಲವಾರು ನಿರ್ಬಂಧನೆಗಳಿವೆ, ನನ್ನ ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸಿಕೊಂಡು ಚಿತ್ರೀಕರಣ ಮಾಡುವ ಉದ್ದೇಶವಿಲ್ಲ, ಎಂದು ನಿರ್ದೇಶಕ ಸೂರಿ ಅಭಿಮಾನಿಗಳಿಗೆ ವಿವರಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಟಗರು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


