ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ ಸಾಯಿಕುಮಾರ್ ಪುತ್ರ 'ಆದಿ'
ಡೈಲಾಗ್ ಕಿಂಗ್ ಸಾಯಿಕುಮಾರ್ ತಮ್ಮ ಪುತ್ರ ಆದಿಯನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ....

ಬೆಂಗಳೂರು: ಡೈಲಾಗ್ ಕಿಂಗ್ ಸಾಯಿಕುಮಾರ್ ತಮ್ಮ ಪುತ್ರ ಆದಿಯನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ.
ತೆಲುಗಿನ ಸೂಪರ್ ಹಿಟ್ ಕಾರ್ತಿಕೇಯ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಸಾಯಿಪುತ್ರ ಆದಿಯನ್ನು ಈ ಚಿತ್ರದ ಮೂಲಕ ಕನ್ನ ಸಿನಿಮಾ ರಂಗಕ್ಕೆ ಪರಿಚಯಿಸಲು ಸಾಯಿರುಮಾರ್ ವೇದಿಕೆ ಸಿದ್ಧಪಡಿಸಿದ್ದಾರೆ.
ಆದಿ ಅಭಿನಯದ ಚೊಚ್ಚಲ ಚಿತ್ರ ‘ಪ್ರೇಮ ಕಾವಾಲಿ’ಯಲ್ಲಿನ ನಟನೆಗೆ ಪ್ರಶಸ್ತಿ ಬಂದಿತ್ತು. ಆನಂತರ ಯಶಸ್ವಿ ಚಿತ್ರಗಳ ಮೂಲಕ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಪುತ್ರನನ್ನು ಕನ್ನಡಕ್ಕೆ ಪರಿಚಯಿಸುತ್ತೇವೆ ಎಂದು ಸಾಯಿಕುಮಾರ್ ಅನೇಕ ಬಾರಿ ಹೇಳಿಕೊಂಡಿದ್ದರು. ಇದೀಗ ಅದು ನಿಜವಾಗುತ್ತಿದೆ.
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ತೆಲುಗಿನಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಿದ್ದರು. ಈಗ ಕನ್ನಡದಲ್ಲಿ ಆದಿ ನಾಯಕನಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದಿ ನಟಿಸಿದ್ದ ‘ಗರಮ್ ಇತ್ತೀಚಗಷ್ಟೇ ತೆರೆಗೆ ಬಂದಿತ್ತು.
ಸಾಯಿಕುಮಾರ್ ಮತ್ತು ಸಹೋದರರಾದ ರವಿಶಂಕರ್ ಹಾಗೂ ಮತ್ತೊಬ್ಬ ಸಹೋದರ ಅಯ್ಯಪ್ಪ ಕನ್ನಡ ಸಿನಿಮಾ ರಂಗದಲ್ಲಿ ಬೇರೂರಿದ್ದಾರೆ. ತಮ್ಮ ತಾಯಿ ಕೃಷ್ಣ ಜ್ಯೋತಿ ಕೂಡ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ಆದಿ ಕೂಡ ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂಬುದು ತಮ್ಮ ಬಯಕೆಯಾಗಿದೆ ಎಂದು ಸಾಯಿಕುಮಾರ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿ ತಂದೆ ಸಾಯಿಕುಮಾರ್ ಜತೆಗೆ ತೆರೆ ಹಂಚಿಕೊಂಡಿರುವ ಅವರ ‘ಚುಟ್ಟಲಾಬ್ಬಾಯಿ’ ಚಿತ್ರ ಕೂಡ ರಿಲೀಸ್ಗೆ ರೆಡಿಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


