ಸಿನಿಮಾ ಸುದ್ದಿ

ಶಿವಣ್ಣ ಪುತ್ರಿಯಾಗಿ ಸ್ಯಾಂಡಲ್ ವುಡ್ ಗೆ ಶ್ರೀನಗರ ಕಿಟ್ಟಿ ಭಾವನಾ ಬೆಳೆಗೆರೆ ಪುತ್ರಿ ಎಂಟ್ರಿ

ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ಪುತ್ರಿ ಪರಿಣಿತ ಬೆಳಗೆರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ....

ಶಿವಣ್ಣ ಪುತ್ರಿಯಾಗಿ ಸ್ಯಾಂಡಲ್ ವುಡ್ ಗೆ ಶ್ರೀನಗರ ಕಿಟ್ಟಿ ಭಾವನಾ ಬೆಳೆಗೆರೆ ಪುತ್ರಿ ಎಂಟ್ರಿ
ಶಿವರಾಜ್ ಕುಮಾರ್ ಮತ್ತು ಪರಿಣಿತ ಬೆಳಗೆರೆ
Published On :

ಬೆಂಗಳೂರು: ತನ್ನ ಮೂರನೇ ವರ್ಷದಲ್ಲೇ ವಿಜ್ಞಾನಿ ಅಥವಾ ಗಗನಯಾತ್ರಿ ಆಗ ಬೇಕೆಂಬ ಬಯಕೆ ಹೊಂದಿದ್ದ ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ಪುತ್ರಿ ಪರಿಣಿತ ಬೆಳಗೆರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ.
 
ಲೀಡರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಪುತ್ರಿಯ ಪಾತ್ರವನ್ನು ಪರಿಣಿತ ನಿರ್ವಹಿಸಲಿದ್ದಾರೆ. ಅಂಡಮಾನ್ ಚಿತ್ರ ಬಳಿಕ ಮತ್ತೆ ತಂದೆ ಮಗಳ ಬಾಂಧವ್ಯದ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಬಹುಭಾಷಾ ನಟಿ ಕನ್ನಡತಿ ಪ್ರಣೀತ ಈ ಚಿತ್ರದ ನಾಯಕಿಯಾಗಿದ್ದಾರೆ.

ಸಹನಾ ಮೂರ್ತಿ ನಿರ್ದೇಶನದ ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ. ತಮ್ಮ ಮಗಳನ್ನು ಚಿತ್ರರಂಗಕ್ಕೆ ತರುವ ಉದ್ದೇಶ ಇರಲಿಲ್ಲ,  ಬಹಳ ಹಿಂದೆಯೇ ಆಕೆಗೆ ನಟಿಸಲು ಅವಕಾಶ ಬಂದಿದ್ದವು, ಆದರೆ ನಾವೇ ಬೇಡ ಎಂದು ಹಿಂದೆ ಸರಿದಿದ್ದೆವು. ಆದರೆ ಹಣೆ ಬರಹು  ಮತ್ತೆ ಆಕೆಯನ್ನು ಸಿನಿಮಾ ಕ್ಷೇತ್ರಕ್ಕೆ ಕರೆದೊಯ್ಯುತ್ತಿದೆ. ಆದ್ದರಿಂದ ಪರಿಣಿತಳನ್ನು ಸಿನಿಮಾದಿಂದ ದೂರ ಸರಿಸಲು ಇಷ್ಟವಿಲ್ಲ ಎಂದು ಪರಿಣಿತ ತಾಯಿ ಭಾವನಾ ಬೆಳೆಗೆರೆ ಹೇಳಿದ್ದಾರೆ.

ಕಾಶ್ಮೀರದಲ್ಲಿ ಶೂಟಿಂಗ್ ನಡೆಯುತ್ತದೆ ಎಂಬ ಕಾರಣದಿಂದ ಪರಿಣಿತ ಚಿತ್ರದಲ್ಲಿ ನಡಿಸಲು ಒಪ್ಪಿಕೊಂಡಿದ್ದಾಳೆ. ಆಫರ್ ಬಂದಾಗ ನಾವು ಈ ಸಂಬಂಧ ಆಕೆ ಜೊತೆ ಮಾತನಾಡಿದೆವು. ಶಿವಣ್ಣ ಜೊತೆ ಅಭಿನಯಿಸಲು ಪರಿಣಿತ ತುಂಬಾ ಎಕ್ಸೈಟ್ ಆದಳು. ಶಿವಣ್ಣ ಇರುವ ಕಾರಣ ನಾನು ಕೂಡ ಒಪ್ಪಿಕೊಂಡೆ ಎಂದು ಭಾವನಾ ತಿಳಿಸಿದ್ದಾರೆ.

ಪರಿಣಿತಗೆ ಪುಸ್ತಕದ ಮೇಲೆ ಪ್ರೀತಿ ಹೆಚ್ಚು, ಆಕೆ ಹಾಡು ನೃತ್ಯ ಎಲ್ಲಾ ಮಾಡುತ್ತಾಳೆ. 1ನೇ ತರಗತಿಯಲ್ಲಿ ಅಭ್ಯಾಸ  ಮಾಡುತ್ತಿರುವ ಪರಿಣಿತ ತುಂಬಾ ಬುದ್ದಿವಂತೆ, ಅವಳ ವಿದ್ಯಾಭ್ಯಾಸದ ಬಗ್ಗೆ ನಮಗೆ ಚಿಂತೆಯಿಲ್ಲ ಎಂದು ಭಾವನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.