ಸಿನಿಮಾ ಸುದ್ದಿ

ಕಿರು ತೆರೆಗೆ ಪಾದಾರ್ಪಣೆ ಮಾಡಲಿರುವ ಶೃತಿ ಹರಿಹರನ್

ಇಮ್ರಾನ್ ಸರ್ದಾರಿಯಾ ಅವರ ನೃತ್ಯನಿರ್ದೇಶನದಲ್ಲಿ ಹಿನ್ನಲೆ ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಶೃತಿ ಹರಿಹರನ್ ನಂತರ ಕನ್ನಡ, ತಮಿಳು ಮತ್ತು ಮಲಯಾಳಮ್ ಸಿನೆಮಾಗಳಲ್ಲಿ

ಕಿರು ತೆರೆಗೆ ಪಾದಾರ್ಪಣೆ ಮಾಡಲಿರುವ ಶೃತಿ ಹರಿಹರನ್
ಶೃತಿ ಹರಿಹರನ್
Published On :

ಬೆಂಗಳೂರು: ಇಮ್ರಾನ್ ಸರ್ದಾರಿಯಾ ಅವರ ನೃತ್ಯನಿರ್ದೇಶನದಲ್ಲಿ ಹಿನ್ನಲೆ ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಶೃತಿ ಹರಿಹರನ್ ನಂತರ ಕನ್ನಡ, ತಮಿಳು ಮತ್ತು ಮಲಯಾಳಮ್ ಸಿನೆಮಾಗಳಲ್ಲಿ ನಟಿಯಾಗಿ ತಳವೂರಿದವರು. ಈಗ ಕನ್ನಡ ಟಿವಿ ವಾಹಿಯೊಂದರ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತಾರಾ ತೀರ್ಪುಗಾರ್ತಿಯಾಗಿ ಕಿರುತೆರೆಗೂ ಪಾದಾರ್ಪಣೆ ಮಾಡಲಿದ್ದಾರೆ. ಇವರ ಜೊತೆ ತೀರ್ಪುಗಾರರಾಗಿ ಮತ್ತೊಬ್ಬ ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಮತ್ತು ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಕಾಣಿಸಿಕೊಳ್ಳಲಿದ್ದಾರೆ. ಅಕುಲ್ ಬಾಲಾಜಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದು ಸುವರ್ಣ ವಾಹಿನಿಯಲ್ಲಿ ಫೆಬ್ರವರಿ ಮೊದಲ ವಾರದಿಂದ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಲೂಸಿಯಾ ಹುಡುಗಿ ಎಂದೇ ಪ್ರಖ್ಯಾತರಾದ ಶೃತಿ ಹರಿಹರನ್ "ನನಗೆ ನೃತ್ಯ ಎಂದರೆ ಪ್ರಾಣ. ನಾನು ಭರತನಾಟ್ಯ ಮತ್ತು ಆಧುನಿಕ ನೃತ್ಯದಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಇದನ್ನು ತಿಳಿದ ವಾಹಿನಿಯವರು ತೀರ್ಪುಗಾರ್ತಿಯಾಗಿ ನನಗೆ ಆಹ್ವಾನ ನೀಡಿದ್ದಾರೆ" ಎನ್ನುತ್ತಾರೆ.

ನಟಿ ಸದ್ಯಕ್ಕೆ ಮೂರು ತಮಿಳು ಸಿನೆಮಾಗಳಲ್ಲಿ ಕೂಡ ಬ್ಯುಸಿಯಾಗಿದ್ದಾರೆ ಅಲ್ಲದೆ ಕನ್ನಡದಲ್ಲಿ ಹರ್ಷ ಅವರ ಜೈ ಮಾರುತಿ ೮೦೦ ರಲ್ಲಿ ನಟಿಸುತ್ತಿದ್ದು, ಪ್ರಜ್ವಲ್ ದೇವರಾಜ್ ಜೊತೆಗೆ 'ಮಾದ ಮತ್ತು ಮಾನಸಿ'ಯಲ್ಲೂ ನಟಿಸುತ್ತಿದ್ದಾರೆ. "ಸದ್ಯಕ್ಕೆ ಹೇಮಂತರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ" ಎನ್ನುತ್ತಾರೆ ಶೃತಿ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.