ಟಪೋರಿ ನಮಿತಾ ಈಗ ಅಘೋರಿ!
ನಟಿ ನಮಿತಾ ಮತ್ತೆ ಬಂದಿದ್ದಾರೆ. ಬರೋಬ್ಬರಿ ಐದಾರು ವರ್ಷಗಳ ನಂತರ ಬಣ್ಣ ಹಚ್ಚಿರುವ ನಮಿತಾ ಈ ಬಾರಿ ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆಂಬುದು...

ನಟಿ ನಮಿತಾ ಮತ್ತೆ ಬಂದಿದ್ದಾರೆ. ಬರೋಬ್ಬರಿ ಐದಾರು ವರ್ಷಗಳ ನಂತರ ಬಣ್ಣ ಹಚ್ಚಿರುವ ನಮಿತಾ ಈ ಬಾರಿ ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆಂಬುದು ಕಾಲಿವುಡ್ ನ ಹಾಟ್ ನ್ಯೂಸ್. ಯಾವುದು ಆ ಚಿತ್ರ? ಅದರಲ್ಲಿನ ನಮಿತಾ ಪಾತ್ರವೇನು? ಎಂಬ ಕುತೂಹಲಕ್ಕೂ ಮುನ್ನ ನಿಮಗೆ ಹೇಳಬೇಕಿರುವುದು ನಮಿತಾ ಕಪೂರ್ ಈಗ ಹೇಗಿದ್ದಾಳೆನ್ನುವುದರ ಬಗ್ಗೆ.
ನಟಿ ನಮಿತಾ ಈಗ ಸ್ಲಿಮ್ ಬಳ್ಳಿ! ಅಯ್ಯೋ, ಆ ಗಾತ್ರ ಎಲ್ಲಾದ್ರೂ ಝೀರೋ ಆಗೋದುಂಟೆ ಎಂಬ ಶಂಕೆಯೇ? ಇದಕ್ಕೆ ಉತ್ತರ ಇಲ್ಲಿರುವ ನಮಿತಾ ಫೋಟೋ! ಚೆನ್ನೈನಲ್ಲಿ ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದಾಗ ನಮಿತಾಳನ್ನು ನೋಡಿ ಕ್ಯಾಮೆರಾಗಳೇ ಬೆಚ್ಚಿಬಿದ್ದವು. ಆ ಮಟ್ಟಿಗೆ ತೆಳಗಾಗಿರುವ ನಮಿತಾ, ಹೆಚ್ಚೂ ಕಮ್ಮಿ ಐದು ವರ್ಷ ಮೂಲೆಗುಂಪಾಗಿದ್ದಳು.
ಜನಪ್ರಿಯ ಮಾದಕ ನಟಿ, ವರ್ಷದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿ, ಕನ್ನಡದಲ್ಲಿ ಕ್ರೇಜಿಸ್ಟಾರ್ ಜತೆ ಸೇರಿ ನೀಲಕಂಠ ನ ಹೂ ಆಗಿದ್ದ ಘಮ್ಮೆಂದಿದ್ದ ಈ ಚೆಲುವೆ ಐದು ವರ್ಷ ಒಂದೇ ಒಂದು ಸುದ್ದಿ ಇಲ್ಲದೆ ಇದ್ದಿದ್ದು ಆಕೆಯ ಪಾಲಿಗೆ ಅಚ್ಚರಿ!
ಈಗ ಬದಲಾಗಿರುವ ನಮಿತಾ ಎಲ್ಲರ ಮುಂದೆ ಬಂದಿದ್ದಾಳೆ. ಅದರಲ್ಲೂ ಒಂದು ಸಿನಿಮಾ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ಹಲವು ವರ್ಷಗಳ ನಂತರ ಈಕೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಹೆಸರು ತಮಿಳಿನ ಪೊಟ್ಟು ಈ ಚಿತ್ರದಲ್ಲಿ ಅಘೋರಿ ಪಾತ್ರದಲ್ಲಿ ನಮಿತಾ ಕಾಣಿಸಿಕೊಳ್ಳುತ್ತಿದ್ದಾರೆ! ಇಲ್ಲಿವರೆಗೂ ಪುರುಷ ಅಘೋರಿಗಳನ್ನೇ ನೋಡಿದ ಪ್ರೇಕ್ಷಕರು ಈಗ ಲೇಡಿ ಅಘೋರಿಯನ್ನು ನೋಡುವ ಭಾಗ್ಯ ಕಲ್ಪಿಸಿದ್ದಾರೆ ನಿರ್ದೇಶಿಕರು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


