ಬೆಂಗಳೂರಿನಲ್ಲಿ ಚಿರು ಸಂಕ್ರಾಂತಿ
ಸಿನಿಮಾ ಮಂದಿ ಹೊಸ ವರ್ಷದ ಆಚರಣೆಗೆ ಹೊರ ದೇಶಗಳಿಗೆ, ಪರ ಊರುಗಳಿಗೆ ಹೋಗುವುದು ಕಾಮನ್. ಆದರೆ, ಸಂಕ್ರಾಂತಿ ಹಬ್ಬದ ಆಚರಣೆಗೆ ಕುಟುಂಬ ಸಮೇತರಾಗಿ...

ಸಿನಿಮಾ ಮಂದಿ ಹೊಸ ವರ್ಷದ ಆಚರಣೆಗೆ ಹೊರ ದೇಶಗಳಿಗೆ, ಪರ ಊರುಗಳಿಗೆ ಹೋಗುವುದು ಕಾಮನ್. ಆದರೆ, ಸಂಕ್ರಾಂತಿ ಹಬ್ಬದ ಆಚರಣೆಗೆ ಕುಟುಂಬ ಸಮೇತರಾಗಿ ಪಕ್ಕದ ರಾಜ್ಯಕ್ಕೆ ಹೋಗುವುದು ತೀರಾ ಅಪರೂಪ ಅಂತ ಹೇಳಬಹುದು.
ಅಂಥ ಅಪರೂಪಕ್ಕೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಕುಟುಂಬ ಸಾಕ್ಷಿಯಾಗುತ್ತಿದೆ. ಹೌದು, ಈ ಬಾರಿ ಚಿರಂಜೀವಿ ಕುಟುಂಬ ಬೆಂಗಳೂರಿನಲ್ಲಿ ಸಂಕ್ರಾಂತಿಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಕುಟುಂಬದ 50 ಮಂದಿ ಸದಸ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿನ ಚಿರಂಜೀವಿ ಅವರ ಫಾರಂ ಹೌಸ್‍ನಲ್ಲಿ ಸಂಕ್ರಾಂತಿ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ, ಅಲ್ಲು ಶಿರಿಷ್, ಸಾಯಿಧರ್ಮ ತೇಜ ಅವರೂ ಬರಲಿದ್ದಾರೆ. ಇವರೊಂದಿಗೆ ಚಿರಂಜೀವಿ ದಂಪತಿ ಅಂತೂ ಇದ್ದೇ ಇರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


