ಸಿನಿಮಾ ಸುದ್ದಿ

ಹಾಲಿವುಡ್ ನಲ್ಲಿ ದಶಕ ಪೂರೈಸಿದ ಇರ್ಫಾನ್ ಖಾನ್

ಭಾರತೀಯ-ಬ್ರಿಟಿಶ್ ನಿರ್ದೇಶಕ ಅಸಿಫ್ ಕಪಾಡಿಯಾ ಅವರ 'ದ ವಾರಿಯರ್' ಸಿನೆಮಾದ ಮೂಲಕ ೨೦೦೬ ರಲ್ಲಿ ಅಂತರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಇರ್ಫಾನ್ ಖಾನ್

ಹಾಲಿವುಡ್ ನಲ್ಲಿ ದಶಕ ಪೂರೈಸಿದ ಇರ್ಫಾನ್ ಖಾನ್
ನಟ ಇರ್ಫಾನ್ ಖಾನ್
Published On :

ಮುಂಬೈ: ಭಾರತೀಯ-ಬ್ರಿಟಿಶ್ ನಿರ್ದೇಶಕ ಅಸಿಫ್ ಕಪಾಡಿಯಾ ಅವರ 'ದ ವಾರಿಯರ್' ಸಿನೆಮಾದ ಮೂಲಕ ೨೦೦೬ ರಲ್ಲಿ ಅಂತರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಇರ್ಫಾನ್ ಖಾನ್ ವಿಶ್ವದ ಎರಡು ಪ್ರಮುಖ ಸಿನೆಮೋದ್ಯಮಗಳ ಭಾಗವಾಗಿರುವದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

"ನನ್ನ ಸಂತಸವನ್ನು ಹೇಳಿಕೊಳ್ಳಲು ಕಷ್ಟ. ಪಶ್ಚಿಮದೇಶಗಳ ಸಿನೆಮಾಗಳಲ್ಲಿ ಭಾರತೀಯರನ್ನು ಅದದೇ ರೀತಿಯಲ್ಲಿ ತೋರಿಸುವುದನ್ನು ಮುರಿಯಲೆಂದು ಅಲ್ಲಿ ನನ್ನನ್ನು ಪರೀಕ್ಷೆಗೆ ಒಡ್ಡಿಕೊಂಡೆ. ಅವರು ನನ್ನನ್ನು ಕೈಬೀಸಿ ಕರೆದರು" ಎಂದು ಇರ್ಫಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅತಿ ದೊಡ್ಡ ಬಜೆಟ್ ನ ವಿದೇಶಿ ಸಿನೆಮಾಗಳಾದ 'ಜುರಾಸಿಕ್ ವರ್ಲ್ಡ್', 'ಎ ಮೈಟಿ ಹಾರ್ಟ್'ನಲ್ಲಿ ನಟಿಸಿ ತಮ್ಮದೇ ಛಾಪು ಮೂಡಿಸಿದ ಇರ್ಫಾನ್ ಈಗ ಬರಲಿರುವ 'ಇನ್ಫರ್ನೋ' ಸಿನೆಮಾದಲ್ಲಿ ಖ್ಯಾತ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಜೊತೆಗೆ ನಟಿಸಲಿದ್ದಾರೆ.

ಬಾಲಿವುಡ್ ನಟನೆಯಲ್ಲೂ ಬಹಳ ಪ್ರಖ್ಯಾತವಾಗಿರುವ 'ಪಿಕು' ನಟ ಎರಡು ಚಿತ್ರರಂಗಳಲ್ಲಿ ತಮಗೆ ಬಂದಿರುವ ಪ್ರಶಂಸೆಗೆ ಧನ್ಯವಾದ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.