ಸಿನಿಮಾ ಸುದ್ದಿ

ವಾರಾಂತ್ಯದಲ್ಲಿ ವಿವಾದಿತ ಕಾಶ್ಮೀರದಲ್ಲಿ 'ಹೆಬ್ಬುಲಿ' ಚಿತ್ರೀಕರಣ

ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಶೂಟಿಂಗ್ ಭಾಗಶಃ ಮುಗಿದಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಈ ವಾರಾಂತ್ಯದಲ್ಲಿ ಕಣಿವೆ ರಾಜ್ಯಕ್ಕೆ ...

ವಾರಾಂತ್ಯದಲ್ಲಿ ವಿವಾದಿತ ಕಾಶ್ಮೀರದಲ್ಲಿ 'ಹೆಬ್ಬುಲಿ' ಚಿತ್ರೀಕರಣ
ಸುದೀಪ್
Published On :

ಬೆಂಗಳೂರು: ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಶೂಟಿಂಗ್ ಭಾಗಶಃ ಮುಗಿದಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಈ ವಾರಾಂತ್ಯದಲ್ಲಿ ಕಣಿವೆ ರಾಜ್ಯಕ್ಕೆ ತೆರಳಲಿದೆ.

ಹಲವು ಪ್ರಯತ್ನಗಳ ನಂತರ ಕಾಶ್ಮೀರದಲ್ಲಿ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ವಿಧಿಸಿದ್ದ ಕರ್ಫ್ಯೂ ತೆರವುಗೊಳಿಸಿರುವುದರಿಂದ ಈ ವಾರಾಂತ್ಯದಲ್ಲಿ ಚಿತ್ರದ ಶೂಟಿಂಗ್ ಗಾಗಿ, ಸುದೀಪ್ ಸೇರಿ 60 ಮಂದಿಯ ಚಿತ್ರತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಚಿತ್ರದ ನಿರ್ದೇಶಕ ಎಸ್. ಕೃಷ್ಣ ತಿಳಿಸಿದ್ದಾರೆ.

ಕಾಶ್ಮೀರದಲ್ಲಿನ ಉದ್ವಿಘ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, 7 ದಿನಗಳ ಕಾಲ ನಾವು ಅಲ್ಲಿ ಶೂಟಿಂಗ್ ನಡೆಸುತ್ತೇವೆ, ಈಗಾಗಲೇ ಚಿತ್ರತಂಡದ ಕೆಲವು ಮಂದಿ ಕಾಶ್ಮೀರಕ್ಕೆ ತೆರಳಿದ್ದಾರೆ.

ಸೆಪ್ಟಂಬರ್ 2 ರಂದು ನಟ ಸುದೀಪ್ ಹುಟ್ಟು ಹಬ್ಬವಿದ್ದು, ಹುಟ್ಟುಹಬ್ಬದ ನಂತರ ಸುದೀಪ್, ನಟಿ ಅಮಲಾ ಪೌಲ್ ಮತ್ತು ಚಿಕ್ಕಣ್ಣ ಸೇರಿದಂತೆ ಉಳಿದ ನಟರು ತೆರಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಚಿತ್ರೀಕರಣ ನಡೆಸುವ ಸ್ಥಳದಲ್ಲಿ ಎಲ್ಲಾ ಭದ್ರತೆಗಳನ್ನು ಕೈಗೊಳ್ಳಲಾಗಿದೆ ಎಂದು  ಅವರು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.