ಯಾರದು ವೆಂಕಟ್?: ಹರಿಪ್ರಿಯಾ
'ನೀರ್ ದೋಸೆ' ಸಿನೆಮಾದ ನಿರ್ದೇಶಕ-ನಿರ್ಮಾಪಕ ಮತ್ತು ಚಿತ್ರತಂಡ ಆಡಿಯೋ ಬಿಡುಗಡೆಯ ಮತ್ತು ಟ್ರೇಲರ್ ಯಶಸ್ಸಿನ ಸಂಭ್ರಮದಲ್ಲಿದ್ದರೆ, ಟ್ರೇಲರ್ ವಿರುದ್ಧ ನಟ ಹುಚ್ಚ ವೆಂಕಟ್ ನೀಡಿರುವ

Published On :
ಬೆಂಗಳೂರು: 'ನೀರ್ ದೋಸೆ' ಸಿನೆಮಾದ ನಿರ್ದೇಶಕ-ನಿರ್ಮಾಪಕ ಮತ್ತು ಚಿತ್ರತಂಡ ಆಡಿಯೋ ಬಿಡುಗಡೆಯ ಮತ್ತು ಟ್ರೇಲರ್ ಯಶಸ್ಸಿನ ಸಂಭ್ರಮದಲ್ಲಿದ್ದರೆ, ಟ್ರೇಲರ್ ವಿರುದ್ಧ ನಟ ಹುಚ್ಚ ವೆಂಕಟ್ ನೀಡಿರುವ ಪ್ರತಿಕ್ರಿಯೆಗಳನ್ನು ತಳ್ಳಿಹಾಕಿದ್ದಾರೆ. ಈ ಆವಹೇಳನಕಾರಿ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚು ಗಮನ ಹರಿಸದಂತೆ ಪ್ರೇಕ್ಷಕರಿಗೂ ಮನವಿ ಮಾಡಿದ್ದಾರೆ.
ಸಿನೆಮಾದಲ್ಲಿ 'ಕಾಲ್ ಗರ್ಲ್' ಪಾತ್ರ ಮಾಡಿರುವ ಹರಿಪ್ರಿಯಾ ಸಿಗರೇಟ್ ಸೇದುತ್ತಿರುವ ಮತ್ತು ಮಧ್ಯಪಾನ ಮಾಡುತ್ತಿರುವ ದೃಶ್ಯಗಳ ಬಗ್ಗೆ ಹುಚ್ಚ ವೆಂಕಟ ಅವಹೇಳನಕಾರಿ ಪ್ರತಿಕ್ರಿಯೆ ನೀಡಿದ್ದರು. ಇದು ಸಂಸ್ಕೃತಿಗೆ ಮಾರಕ ಎಂದಿದ್ದ ವೆಂಕಟ್ ನಿದೇಶಕ ವಿಜಯ್ ಪ್ರಸಾದ್ ವಿರುದ್ಧವೂ ಹರಿಹಾಯ್ದಿದ್ದರು.
ಈಗ ಇಡೀ ಸಿನೆಮಾ ತಂಡ ಒಮ್ಮತವಾಗಿ ಹುಚ್ಚ ವೆಂಕಟ್ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂದಿದೆ. ಇದರ ಬಗ್ಗೆ ಹರಿಪ್ರಿಯಾ ಅವರನ್ನು ಪ್ರಶ್ನಿಸಿದಾಗ "ಯಾರದು ವೆಂಕಟ್" ಎಂದು ಕೇಳಿರುವುದಲ್ಲದೆ "ನೀರ್ ದೋಸೆ ಸಿನೆಮಾದಲ್ಲಿ ನನ್ನ ಪಾತ್ರಕ್ಕೆ ಚಿತ್ರರಂಗದ ಸಹೋದ್ಯೋಗಿಗಳಿಂದ ಬಂದಿರುವ ಅದ್ಭುತ ಪ್ರತಿಕ್ರಿಯೆಗಳಿಗೆ ಬಹಳ ಸಂತಸಗೊಂಡಿದ್ದೇನೆ" ಎನ್ನುತ್ತಾರೆ.
"ಕಾಲ್ ಗರ್ಲ್ ಪಾತ್ರ ಮಾಡುವುದು ಸವಾಲು, ನಾನು ಅದನ್ನು ಸಮರ್ಥವಾಗಿ ನಿಭಾಯಿಸಿರುವುದಕ್ಕೆ ಖುಷಿಸಿದೆ. ಸಿನೆಮಾ ಎಂಬುದು ಮನೋರಂಜನೆ ಮತ್ತು ನಾವು ಮಾಡುವ ಪಾತ್ರಗಳೆಲ್ಲಾ ಬೆಳ್ಳಿ ತೆರೆಗಾಗಿ" ಎಂದು ನಟಿ ಹೇಳಿದ್ದಾರೆ.
ಹಾಗೆಯೇ ಗಮನವನ್ನು ಬೇರೆ ಕಡೆಗೆ ಹರಿಸಲು ಕರೆ ನೀಡಿರುವ ನಟಿ ಹರಿಪ್ರಿಯಾ "ಕಳಸಾ ಬಂಡೂರಿ ನದಿ ವಿವಾದದ ಬಗೆಗೆ ಗಮನ ಹರಿಸಬಹುದು" ಎಂದು ಸಲಹೆ ನೀಡಿದ್ದಾರೆ. "'ನೀರ್ ದೋಸೆ' ಪ್ರಖ್ಯಾತವಾಗಿರುವುದರಿಂದ ಇಂತಹ ಪ್ರತಿಕ್ರಿಯೆ ನೀಡಿ ವೆಂಕಟ ಅಂತಹವರು ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ" ಎಂದು ಕೂಡ ಅವರು ಹೇಳಿದ್ದಾರೆ.
ಈ ವಿವಾದದ ಬಗ್ಗೆ ನಟ ಜಗ್ಗೇಶ್ ಅವರನ್ನು ಪ್ರಶ್ನಿಸಿದಾಗ "ನಾವು ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು "ನಾನು ನನ್ನ ಎದುರು ಕೂತು ಚರ್ಚಿಸಬಲ್ಲ ಮನುಷ್ಯನ ಜೊತೆಗೆ ಮಾತುಕತೆ ಇಷ್ಟ ಪಡುತ್ತೇನೆ. ನಾನು ಹೇಳಿಕೆ ನೀಡಿ ನನ್ನ ಮಟ್ಟವನ್ನು ಅವರಿಗಿಂತಲೂ ಕೆಳಗಿಳಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


