ದಕ್ಷಿಣದತ್ತ ಅಕ್ಷಯ್ ಚಿತ್ತ; ನಂದ ಕಿಶೋರ್ ದ್ವಿಭಾಷಾ ಚಿತ್ರಕ್ಕೆ ಬಂಡವಾಳ
ಬಾಲಿವುಡ್ ನಟ ಅಕ್ಷಯ್ ಕುಮಾರ್ ದಕ್ಷಿಣದತ್ತ ಮುಖ ಮಾಡಿದ್ದು, ದಕ್ಷಿಣ ಭಾರತದ ಚಿತ್ರಗಳಿಗೆ ಬಂಡವಾಳ ಹೂಡಲು ಮುಂದಾಗಿದ್ದಾರೆ.

ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ದಕ್ಷಿಣದತ್ತ ಮುಖ ಮಾಡಿದ್ದು, ದಕ್ಷಿಣ ಭಾರತದ ಚಿತ್ರಗಳಿಗೆ ಬಂಡವಾಳ ಹೂಡಲು ಮುಂದಾಗಿದ್ದಾರೆ.
ಅಕ್ಷಯ್ ಕುಮಾರ್ ಒಡೆತನದ ಹರಿ ಓಂ ಎಂಟರ್ ಟೈನ್ ಮೆಂಟ್ಸ್ ಮೂಲಕ ಅಕ್ಷಯ್ ದಕ್ಷಿಣ ಭಾರತದ ಚಿತ್ರಗಳಿಗೆ ಬಂಡವಾಳ ಹೂಡಲು ಮುಂದಾಗಿದ್ದು, ಅವರ ಯೊಜನೆಯ ಮೊದಲ ಭಾಗವಾಗಿ ಸ್ಯಾಂಡಲ್ ವುಡ್ ಚಿತ್ರವೊಂದಕ್ಕೆ ಬಂಡವಾಳ ಹೂಡಲಿದ್ದಾರಂತೆ. ಅದೂ ಕೂಡ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ ಅಕ್ಷಯ್ ಬಂಡವಾಳ ಹೂಡುತ್ತಿದ್ದು, ಈ ಚಿತ್ರವನ್ನು ಅಧ್ಯಕ್ಷ ಖ್ಯಾತಿಯ ನಂದ ಕಿಶೋರ್ ನಿರ್ದೇಶಿಸುತ್ತಿದ್ದಾರಂತೆ.
ಇನ್ನು ಪ್ರಮುಖ ಅಂಶವೆಂದರೆ ಈ ಬಹು ನಿರೀಕ್ಷಿತ ಚಿತ್ರ ಏಕಕಾಲದಲ್ಲಿ ಹಿಂದಿ ಮತ್ತು ಕನ್ನಡದಲ್ಲಿ ತಯಾರಾಗುತ್ತಿದ್ದು, ಚಿತ್ರಕ್ಕೆ ಬಂಡವಾಳ ಹೂಡುವುದಷ್ಟೇ ಅಲ್ಲದೇ ಅಕ್ಷಯ್ ಕುಮಾರ್ ಹಿಂದಿ ಅವರತರಣಿಕೆಯ ಚಿತ್ರದಲ್ಲಿ ಪುನೀತ್ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಬೆಂಗಳೂರು ಮೂಲದ ಡಿಸೈನರ್ ಹಾಗೂ ಅಕ್ಷಯ್ ಕುಮಾರ್ ಅವರ ಆಪ್ತ ಸ್ನೇಹಿತ ರಮೇಶ್ ದೆಂಬ್ಲಾ ಅವರು ಈ ಚಿತ್ರ ನಿರ್ಮಾಣದ ಮೇಲ್ವಿಚಾರಣೆ ನೋಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಹು ನಿರೀಕ್ಷಿತ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಮುಂಬೈನಲ್ಲಿರುವ ಅಕ್ಷಯ್ ನಿವಾಸಕ್ಕೆ ತೆರಳಿದ್ದ ನಟ ಪುನೀತ್ ಹಾಗೂ ನಿರ್ದೇಶಕ ನಂದಕಿಶೋರ್ ಚಿತ್ರಸಂಬಂಧ ಚರ್ಚಿಸಿದ್ದಾರಂತೆ. ಅಲ್ಲದೆ ಚಿತ್ರದ ಕತೆಯ ಸ್ಯಾಂಪಲ್ ಅನ್ನು ಕೂಡ "ನಿರ್ಮಾಪಕ" ಅಕ್ಷಯ್ ಕುಮಾರ್ ಗೆ ನೀಡಲಾಗಿದೆಯಂತೆ.
ಇನ್ನು ಬಾಲಿವುಡ್ ಚಿತ್ರ ಮಾಡುವ ಮಹಾದಾಸೆ ಹೊಂದಿರುವ ನಿರ್ದೇಶಕ ನಂದಕಿಶೋರ್ ಅವರು, ಅಕ್ಷಯ್ ಕುಮಾರ್ ಅವರ ಪ್ರೊಡಕ್ಷನ್ ಹೌಸ್ ಗಿಂತ ಮತ್ತೊಂದು ಉತ್ತಮ ವೇದಿಕೆ ತಮಗೆ ಸಿಗುವುದಿಲ್ಲ. ಹೀಗಾಗಿ ಅಕ್ಷಯ್ ಅವರಿಗೆ ಚಿತ್ರ ಮಾಡಿಕೊಡಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ. ಇನ್ನು ಈ ನೂತನ ಚಿತ್ರ 2017ರ ಜನವರಿಯಲ್ಲಿ ಸೆಟ್ ಏರಲಿದೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


