ನಟಿ ಅಮಲಾ ಪೌಲ್ - ವಿಜಯ್ ವಿಚ್ಛೇದನಕ್ಕೆ ಮಾವ ಕಾರಣ?
ಎರಡು ವರ್ಷಗಳ ಹಿಂದೆ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ ಅಮಲಾ ಪೌಲ್...

Published On :
ನವದೆಹಲಿ: ಎರಡು ವರ್ಷಗಳ ಹಿಂದೆ ನಿರ್ದೇಶಕ ಎ.ಎಲ್ ವಿಜಯ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಕ್ಷಿಣ ಭಾರತದ ಹಾಟ್ ನಟಿ ಅಮಲಾ ಪೌಲ್ ಈಗ ಡೈವೋರ್ಸ್ ಹಾದಿಯಲ್ಲಿದ್ದು, ಇದಕ್ಕೆ ನಟಿಯ ಮಾವ ಕಾರಣ ಎನ್ನಲಾಗುತ್ತಿದೆ.
ಮಲಯಾಳಂ ಚಿತ್ರ ನಿರ್ದೇಶಕ ವಿಜಯ್ ನಿರ್ದೇಶನದ ದಿವ ತಿರುಮಗಲ್ ಚಿತ್ರದಲ್ಲಿ ನಟಿಯಾಗಿ ಅಮಲಾ ಪೌಲ್ ನಟಿಸಿದ್ದರು. ಇಲ್ಲಿಂದ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ 2014ರಲ್ಲಿ ಮದುವೆಯಾಗಿದ್ದರು.
ಅಮಲಾ ಅವರು ಮದುವೆಯ ನಂತರವೂ ನಟನೆ ಮುಂದುವರೆಸಿದ್ದರು. ಇದಕ್ಕೆ ಅವರ ಪತಿ ಸಹ ಸಹಕಾರ ನೀಡುತ್ತಿದ್ದರು. ಆದರೆ ವಿಜಯ್ ಅವರ ತಂದೆ ಎ.ಎಲ್ ಅಜಗಪ್ಪನ್ ನಟನೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗುತ್ತಿದೆ. ಈ ವಿಚಾರವಾಗಿ ಪತಿ ವಿಜಯ್ ಹೆತ್ತವರ ನಿರ್ಣಯಕ್ಕೆ ಬದ್ಧವಾಗಿದ್ದರಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಸದ್ಯ ಮಲಯಾಳಿ ಚಿತ್ರ ಷಹಜಾನುಂ ಪರೀಕುತ್ತಿಯುಮ್ ಚಿತ್ರದಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಸ್ಟಾರ್ ನಟಿ ಅಮಲಾ ಪೌಲ್ ಅವರ ಸಿನಿ ಬದುಕಿಗೆ ಮಾವನೇ ಶತ್ರುವಾದ ಹಿನ್ನೆಲೆಯಲ್ಲಿ ಪತಿಗೆ ವಿಚ್ಛೇದನ ನೀಡುತ್ತಿದ್ದಾರೆ ಎನ್ನಲಾಗಿದೆ.
ವಿವಾಹದ ನಂತರ ಕೂಡ ಅಮಲಾ ಹಲವು ಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಪಡೆದಿದ್ದರು. ಆದರೆ ಪ್ರಾರಂಭದಿಂದಲೂ ಪತಿಯ ಕುಟುಂಬದಿಂದ ನಟನೆಗೆ ವಿರೋಧವಿತ್ತು. ಇದರಿಂದಾಗಿ ಅಮಲಾ ಹಲವು ಆಫರ್ಗಳನ್ನು ತಿರಸ್ಕರಿಸಿದ್ದರು. ಇದೀಗ ಸಿನಿ ಬದುಕಿನಿಂದ ಸಂಪೂರ್ಣ ದೂರವಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


