ಶೀಘ್ರದಲ್ಲೇ 'ರಥಾವರ' ಟ್ರೇಲರ್
ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣ ಬುಧವಾರ ಮಂಗಳೂರಿನಲ್ಲಿ ಸಂಪೂರ್ಣಗೊಂಡಿದೆ.

ಬೆಂಗಳೂರು: ಶ್ರೀಮುರಳಿ ಮತ್ತು ರಚಿತಾ ರಾಮ್ ನಟನೆಯ 'ರಥಾವರ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣ ಬುಧವಾರ ಮಂಗಳೂರಿನಲ್ಲಿ ಸಂಪೂರ್ಣಗೊಂಡಿದೆ.
ತಮ್ಮ ಹಿಂದಿನ ಚಿತ್ರ 'ಉಗ್ರಂ'ನ ಭಾರಿ ಯಶಸ್ಸಿನ ನೆರಳಿನಲ್ಲಿರುವ ಮುರಳಿ "ಜನ ಈ ಹೊಸ ಚಿತ್ರವನ್ನು ಹೇಗೆ ಸ್ವೀಕರಿಸುತ್ತರೋ ಎಂಬುದು ಧನಾತ್ಮಕವಾದ ಹೆದರಿಕೆ" ಎನ್ನುತ್ತಾರೆ.
ಮುಂದಿನ ೧೦ ದಿನಗಳಲ್ಲಿ ಸಿನೆಮಾದ ಟ್ರೇಲರ್ ಬಿಡುಗಡೆಯಾಗಲಿದೆಯಂತೆ. "ಎಲ್ಲವೂ ಸರಿಯಾದ ಸಮಯಕ್ಕೆ ಮುಗಿಯುವ ಭರವಸೆಯಿದೆ. ಈ ವರ್ಷದಲ್ಲೇ ಸಿನೆಮಾ ಬಿಡುಗಡೆ ಮಾಡಬೇಕೆಂದಿದ್ದೇವೆ. ಆದರೆ ನಿಖರವಾದ ತಿಂಗಳು ದಿನ ಹೇಳಲು ಸಾಧ್ಯವಿಲ್ಲ" ಎಂದು ಮುರಳಿ ವಿವರಿಸುತ್ತಾರೆ.
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಚಲನಚಿತ್ರದ ಚಿತ್ರೀಕರಣ ಕಳೆದ ಡಿಸೆಂಬರ್ ನಲ್ಲಿ ಪ್ರಾರಂಭವಾಗಿತ್ತು. ಸಿನೆಮಾದ ಕೆಲವು ದೃಶ್ಯಗಳನ್ನು ಬಿಟ್ಟರೆ ಸಿನೆಮಾದ ಚಿತ್ರಕಥೆಯ ಬಗ್ಗೆ ಸಣ್ಣ ಸುಳಿವನ್ನು ಕೂಡ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ರವಿಶಂಕರ್ ಮತ್ತು ಚರಣ್ ರಾಜ್ ಕೂಡ ಸಿನೆಮಾದಲ್ಲಿ ನಟಿಸಿದ್ದು, ಮಂಜುನಾಥ್ ನಿರ್ಮಾಪಕರು. ಧರ್ಮ ವಿಶ್ ಅವರು ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


