ಹರಿಪ್ರಿಯಾ ನಟನೆಯ ಮೂರು ಸಿನೆಮಾಗಳು ಬಿಡುಗಡೆಗೆ ಸಿದ್ಧ
ಈಗಷ್ಟೆ 'ಬುಲೆಟ್ ಬಸ್ಯಾ' ಚಿತ್ರೀಕರಣ ಮುಗಿಸಿರುವ ನಟಿ ಹರಿಪ್ರಿಯಾ ಅವರ ಮೂರು ಚಲನಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಬೆಂಗಳೂರು: ಈಗಷ್ಟೆ 'ಬುಲೆಟ್ ಬಸ್ಯಾ' ಚಿತ್ರೀಕರಣ ಮುಗಿಸಿರುವ ನಟಿ ಹರಿಪ್ರಿಯಾ ಅವರ ಮೂರು ಚಲನಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. 'ರನ್ನ' ಮತ್ತು 'ರಣತಂತ್ರ' ಸಿನೆಮಾಗಳು ಬಿಡುಗಡೆಗೆ ಕಾಯುತ್ತಿದ್ದು, ಜೊತೆಜೊತೆಯಲ್ಲೇ 'ರಿಕ್ಕಿ' ಮತ್ತು 'ರಾಜಧಾನಿ-೨' ಸಿನೆಮಾಗಳ ಚಿತ್ರಿಕರಣವೂ ಪ್ರಗತಿಯಲ್ಲಿದೆ. ರಾಜಧಾನಿ-೨ ಸಿನೆಮಾದ ೨ ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದ್ದು ಅದೂ ಕೂಡ ಶೀಘ್ರದಲ್ಲೆ ಬಿಡುಗಡೆ ಕಾಣುವ ಸಾಧ್ಯತೆ ಇದೆ.
'ಬುಲೆಟ್ ಬಸ್ಯಾ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣ, ಒಂದು ಹಾಡನ್ನು ಬ್ಯಾಂಕಾಂಗ್ ನಲ್ಲಿ ಚಿತ್ರೀಕರಣ ಮುಗಿಸಿದ ಹರಿಪ್ರಿಯ ಸಂತಸಗೊಂಡಿದ್ದು "ಸ್ಟ್ರಾಬೆರ್ರಿ ಪಟ್ಟಣ ಮತ್ತು ಡ್ರಾಗನ್ ಹಳ್ಳಿಯಲ್ಲಿ ಈ ಹಾಡು ಚಿತ್ರೀಕರಣಗೊಂಡಿದೆ. ಇವೆರಡು ಕನ್ನಡ ಸಿನೆಮಾಗಳಿಗೆ ಹೊಸ ಜಾಗಗಳು" ಎಂದಿದ್ದಾರೆ.
ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿರುವ ಹರಿಪ್ರಿಯಾ, ಈ ಕಲ್ಪನೆಯ ಹಾಡಿನಲ್ಲಿ ಗ್ಲ್ಯಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರಂತೆ. "ಇದು ಶರಣ್ ಜೊತೆಗಿನ ಡ್ಯುಯೆಟ್ ಹಾಡು" ಎನ್ನುತ್ತಾರೆ ಹರಿಪ್ರಿಯ. "ಸುಡು ಬಿಸಿಲಿನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೆ ವಿಪರೀತ ಟ್ರಾಫಿಕ್ ಜಾಮ್ ಇರುತ್ತಿತ್ತು. ಇವೆಲ್ಲದರ ಹೊರತಾಗಿಯೂ 'ಬುಲೆಟ್ ಬಸ್ಯಾ' ಗೆ ಕೆಲಸ ಮಾಡಲು ಅತೀವ ಸಂತಸವಾಗಿದೆ" ಎನ್ನುತ್ತಾರೆ ಹರಿಪ್ರಿಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


