ಸಿನಿಮಾ ಸುದ್ದಿ

ಮುಂದುವರೆದ 'ಓಂ' ಮ್ಯಾಜಿಕ್; ಮತ್ತೆ ೧೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ

ನಟ ಶಿವರಾಜ್ ಕುಮಾರ ಮತ್ತು ನಿರ್ದೇಶಕ ಉಪೇಂದ್ರ ಜುಗಲ್ ಬಂಧಿಯಲ್ಲಿ ಮೂಡಿ ಬಂದ ೧೯೯೫ ರಲ್ಲಿ ಬಿಡುಗಡೆಯಾದ 'ಓಂ'

ಮುಂದುವರೆದ 'ಓಂ' ಮ್ಯಾಜಿಕ್; ಮತ್ತೆ ೧೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ
'ಓಂ' ಚಲನಚಿತ್ರದ ಸ್ಟಿಲ್
Published On :

ಬೆಂಗಳೂರು: ನಟ ಶಿವರಾಜ್ ಕುಮಾರ ಮತ್ತು ನಿರ್ದೇಶಕ ಉಪೇಂದ್ರ ಜುಗಲ್ ಬಂಧಿಯಲ್ಲಿ ಮೂಡಿ ಬಂದ ೧೯೯೫ ರಲ್ಲಿ ಬಿಡುಗಡೆಯಾದ 'ಓಂ' ಸಿನೆಮಾ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲು ಸಿದ್ಧವಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಈ ಸಿನೆಮಾ ೫೫೦ ಬಾರಿ ಮರುಬಿಡುಗಡೆಯಾಗಿದೆ. ಈ ಸಿನೆಮಾ ಮೊದಲ ಬಾರಿ ಬಿಡುಗಡೆಯಾಗಿದ್ದಾಗ, ೪೦೦ ಚಿತ್ರಮಂದಿರಗಳಲ್ಲಿ ಸಿನೆಮಾ ಓಡಿತ್ತು.

ಡಿಜಿಟಲ್ ಇಂಟರ್ ಮಿಡಿಯೇಟ್ ಮತ್ತು ಡಿಟಿಎಸ್ ತಂತ್ರಜ್ಞಾನ ಬಳಸಿ ಈ ಸಿನೆಮಾವನ್ನು ಕರ್ನಾಟಕದಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಕಿಶೋರ್ ಫಿಲ್ಮ್ಸ್ ಅವರು ಈ ಸಿನೆಮಾವನ್ನು ವಿತರಿಸುತ್ತಿದ್ದಾರೆ.

ಈ ನೆಪದಲ್ಲೇ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಒಟ್ಟಾಗಿ ಸಿನೆಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. "ನಾನು ಈ ಯೋಜನೆಗೆ ಸಿದ್ಧನಿದ್ದೇನೆ. ಉಪೇಂದ್ರ ಅವರು ಮನಸ್ಸು ಮಾಡಬೇಕಷ್ಟೆ. ಅವರು ಇನ್ನೂ ಸಮಯ ಬರಲಿ, ಒಳ್ಳೆಯ ಯೋಜನೆ ಮಾಡೋಣ ಎನ್ನುತ್ತಿದ್ದಾರೆ" ಎಂದಿದ್ದಾರೆ ಶಿವರಾಜ್ ಕುಮಾರ್.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.