'ಪ್ಲಸ್'ಗಾಗಿ ಗೆಜ್ಜೆ ಕಟ್ಟಿದ ಶೃತಿ ಹರಿಹರನ್
ನಟಿ ಶೃತಿ ಹರಿಹರನ್ ತಮಗೆ ಇಷ್ಟವಾದ ಕೆಲಸ 'ನೃತ್ಯ'ಕ್ಕೆ ಹಿಂದಿರುಗಿದ್ದಾರೆ. ಗಡ್ಡ ವಿಜಿ ನಿರ್ದೇಶನದ 'ಪ್ಲಸ್' ಸಿನೆಮಾದಲ್ಲಿ ಕಿರು ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬೆಂಗಳೂರು: ನಟಿ ಶೃತಿ ಹರಿಹರನ್ ತಮಗೆ ಇಷ್ಟವಾದ ಕೆಲಸ 'ನೃತ್ಯ'ಕ್ಕೆ ಹಿಂದಿರುಗಿದ್ದಾರೆ. ಗಡ್ಡ ವಿಜಿ ನಿರ್ದೇಶನದ 'ಪ್ಲಸ್' ಸಿನೆಮಾದಲ್ಲಿ ಕಿರು ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ನೃತ್ಯ ಗುರು ಇಮ್ರಾನ್ ಸರ್ದಾರಿಯಾ ಹಾಗು ದ್ಯಾವ್ರೆ ಸಿನೆಮಾದಲ್ಲಿ ಗಡ್ಡ ವಿಜಿ ಜೊತೆಗೆ ಕೆಲಸ ಮಾಡಿದ್ದಕ್ಕೆ ಈ ಪಾತ್ರವನ್ನು ಒಪ್ಪೊಕೊಂಡಿದ್ದರಂತೆ. "ಇದು ಎರಡು ದಿನದ ಚಿತ್ರೀಕರಣದ ಹಾಡು. ರಜಾದಿನಗಳನ್ನು ಸಂಭ್ರಮಿಸುವ ಹಾಸ್ಯ ಭರಿತ ಹಾಡು" ಎನ್ನುತ್ತಾರೆ ಶೃತಿ.
ಈ ಹಾಡನ್ನು ಆಯ್ಕೆ ಮಾಡಲು ಶೃತಿ ಅವರಿಗೆ ಎರಡು ಪ್ರಮುಖ ಕಾರಣಗಳಿವೆಯಂತೆ. "ನಾನು ಹಿನ್ನಲೆ ನೃತ್ಯಗಾರ್ತಿಯಾಗಿ ಕೆಲಸ ಪಾರಂಭಿಸಿದ್ದು ಎಂದು ಎಲ್ಲರಿಗೂ ತಿಳಿದಿದೆ. ಮತ್ತು ನಾನು ನಟನೆ ಪ್ರಾರಂಭಿಸಿದ ಮೇಲೆ ನನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಸಿಗಲೇ ಇಲ್ಲ. ಈ ವಿಶೇಷ ಅವಕಾಶ ನನ್ನ ನೃತ್ಯ ಕಶಲ್ಯವನ್ನು ಪ್ರದರ್ಶಿಸಲು ಸಾಧ್ಯ ಮಾಡಿಕೊಟ್ಟಿದೆ ಮತ್ತು ಇದು ನಾನು ಉತ್ತಮ ನೃತ್ಯಗಾರ್ತಿ ಎಂದು ತಿಳಿಸಲಿದೆ" ಎನ್ನುತ್ತಾರೆ ಲೂಸಿಯಾ ನಟಿ.
ಈ ಹಾಡಿನ ನೃತ್ಯ ನಿರ್ದೇಶನವನ್ನು ಇಮ್ರಾನ್ ಮಾಡಿರುವುದರಿಂದ ಶೃತಿ ಅವರಿಗೆ ಇದು ಹೆಚ್ಚು ವಿಶೇಷವಾಗಿದೆ. "ನನಗೆ ಕುಣಿಯಲು ಕಲಿಸಿದವರು ಅವರು. ಇದರ ಚಿತ್ರೀಕರಣ ರಾಕ್ಲೈನ್ ಸ್ಟೂಡಿಯೋದಲ್ಲೆ ನಡೆದಿದ್ದರಿಂದ ಹಳೆಯದೆಲ್ಲ ನೆನಪಿಗೆ ಬಂತು. ಏಕೆಂದರೆ ರಾಗಿಣಿ ದ್ವಿವೇದಿಯರ ಪ್ರಖ್ಯಾತ ಹಾಡು 'ತುಪ್ಪ ಬೇಕಾ ತುಪ್ಪ' ಚಿತ್ರೀಕರಣಗೊಂಡದ್ದು ಇಲ್ಲೇ. ನಾನು ಆ ಹಾಡಿಗೆ ಹಿನ್ನಲೆಯಲ್ಲಿ ಕುಣಿಯುತ್ತಿದ್ದೆ. ಇಂದು ನಾನು ಹಲವು ಸಿನೆಮಾಗಳಲ್ಲಿ ನಾಯಕನಟಿಯಾಗಿ ನಟಿಸಿದ ಮೇಲೆ ಕೇಂದ್ರ ಸ್ಥಾನವನ್ನು ಅಲಂಕರಿಸಿದ್ದೇನೆ ಹಾಗೂ ನನ್ನ ಗುರು ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಇದು ನನ್ನನು ಭಾವನಾತ್ಮಕ ಮಾಡಿದೆ" ಎನ್ನುತ್ತಾರೆ ಶೃತಿ.
ನಿರ್ದೇಶಕ ವಿಜಿಗೆ 'ಪ್ಲಸ್' ಎರಡನೇ ಸಿನೆಮಾ. ಮುಖ್ಯ ಪಾತ್ರಗಳಲ್ಲಿ ಅನಂತ ನಾಗ್ ಮತ್ತು ಚೇತನ್ ಚಂದ್ರ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


